2 ಈರುಳ್ಳಿ-ಸಣ್ಣಗೆ ಹಚ್ಚಿಕೊಂಡಿದ್ದು, ½ ಕಪ್-ಮೈದಾ ಹಿಟ್ಟು, ರವೆ-6 ಟೇಬಲ್ ಸ್ಪೂನ್, ಅಕ್ಕಿ ಹಿಟ್ಟು-1/2 ಕಪ್, 2 ಹಸಿಮೆಣಸು-ಸಣ್ಣಗೆ ಹಚ್ಚಿದ್ದು, ಅರ್ಧ ಇಂಚು ಶುಂಠಿ ತುರಿದಿಟ್ಟುಕೊಂಡಿದ್ದು, ಉಪ್ಪು-ರುಚಿಗೆ ತಕ್ಕಷ್ಟು, ಬಿಳಿ ಎಳ್ಳು-2 ಟೀ ಸ್ಪೂನ್, ಗಸಗಸೆ-1 ಟೀ ಸ್ಪೂನ್, ಕರಿಬೇವು-5 ಎಸಳು ಸಣ್ಣಗೆ ಕತ್ತರಿಸಿಕೊಳ್ಳಿ, ಎಣ್ಣೆ-ಕರಿಯಲು.
ಮಾಡುವ ವಿಧಾನ:
ಮೊದಲಿಗೆ 2 ಚಮಚದಷ್ಟು ಎಣ್ಣೆ ಬಿಸಿ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರವೆ ಹಾಕಿಕೊಳ್ಳಿ. ನಂತರ ಉಪ್ಪು ಸೇರಿಸಿ. ನಂತರ ಇದಕ್ಕೆ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಸಾಮಾಗ್ರಿಗಳೆನ್ನೆಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಅರ್ಧ ಗಂಟೆ ಇದನ್ನು ಹಾಗೆಯೇ ಬಿಡಿ. ಈರುಳ್ಳಿ ನೀರು ಬಿಟ್ಟುಕೊಳ್ಳುತ್ತೆ. ಬೇಕಿದ್ದರೆ 1 ಟೀ ಸ್ಪೂನ್ ನೀರು ಹಾಕಿ ಎಷ್ಟು ಬೇಕೋ ಅಷ್ಟು ಹಿಟ್ಟು ಮಾತ್ರ ತೆಗೆದುಕೊಂಡು ಹಿಟ್ಟು ಕಲಸಿಕೊಳ್ಳಿ. ಒಂದು ಪ್ಲಾಸ್ಟಿಕ್ ಕವರ್ ಗೆ ಎಣ್ಣೆ ಸವರಿ ಅದರ ಮೇಲೆ ಈ ಹಿಟ್ಟು ಹಾಕಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.