ಮಕ್ಕಳಿಗೆ ಕುಕ್ಕೀಸ್ ಎಂದರೆ ತುಂಬಾ ಇಷ್ಟ. ಸಂಜೆ ಸ್ಕೂಲ್ ನಿಂದ ಬಂದ ಮೇಲೆ ಮಕ್ಕಳಿಗೆ ಈ ರುಚಿಯಾದ ಕುಕ್ಕೀಸ್ ಅನ್ನು ಮಾಡಿಕೊಡಿ. ಸಂಜೆ ಟೀ ಸಮಯದಲ್ಲಿ ದೊಡ್ಡವರು ಕೂಡ ಇದನ್ನು ಮಾಡಿಕೊಂಡು ತಿನ್ನಬಹುದು.
ಮೊಟ್ಟೆ ಇಲ್ಲದೇ ಇದನ್ನು ಮಾಡಬಹುದ್ದಾದರಿಂದ ಮೊಟ್ಟೆ ತಿನ್ನದೇ ಇದ್ದವರಿಗೂ ಇದು ಇಷ್ಟವಾಗುತ್ತದೆ. ಮಾಡುವುದಕ್ಕೆ ಏನು ಬೇಕು ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.
100 ಗ್ರಾಂ ಮೈದಾ ಹಿಟ್ಟು, 500 ಗ್ರಾಂ ಸಕ್ಕರೆ, 600 ಗ್ರಾಂ ಬೆಣ್ಣೆ, 30 ಗ್ರಾಂ ಹಾಲಿನ ಪುಡಿ, 25 ಗ್ರಾಂ ಕಸ್ಟರ್ಡ್ ಪೌಡರ್, 100 ಗ್ರಾಂ ಹಾಲು, 200 ಗ್ರಾಂ ಬಟರ್ ಸ್ಕಾಚ್ ಚಿಪ್ಸ್.
ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ
ಮೊದಲಿಗೆ ಒಂದು ಅಗಲವಾದ ಪಾತ್ರೆಗೆ ಮೈದಾಹಿಟ್ಟು, ಸಕ್ಕರೆ ಪುಡಿ, ಬೆಣ್ಣೆ, ಹಾಲಿನ ಪುಡಿ, ಕಸ್ಟರ್ಡ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸಿಕೊಂಡು ಗಂಟಿಲ್ಲದಂತೆ ಹಿಟ್ಟು ತಯಾರಿಸಿಕೊಳ್ಳಿ. ನಂತರ ಕುಕ್ಕೀಸ್ ಪ್ಯಾನ್ ಗೆ ಸ್ವಲ್ಪ ತುಪ್ಪ ಸವರಿ ಸ್ವಲ್ಪ ಹಿಟ್ಟನ್ನು ಉದುರಿಸಿಕೊಳ್ಳಿ. ಈ ಮಿಶ್ರಣವನ್ನು ಕುಕ್ಕೀಸ್ ಪ್ಯಾನ್ ಗೆ ಹಾಕಿ ಇದರ ಮೇಲೆ ಬಟರ್ ಸ್ಕಾಚ್ ಚಿಪ್ಸ್ ಅನ್ನು ಹಾಕಿ ನಿಮಗೆ ಬೇಕಾದ ಶೇಪ್ ನಲ್ಲಿ ಕತ್ತರಿಸಿ. ನಂತರ ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಯಾದ ಕುಕ್ಕೀಸ್ ಸಿದ್ಧವಾಗುತ್ತದೆ.
ಒವೆನ್ ಇಲ್ಲದವರು ಕುಕ್ಕುರ್ ನಲ್ಲೂ ಮಾಡಬಹುದು. ಆದರೆ ಕುಕ್ಕರ್ ತಳಕ್ಕೆ ಪುಡಿ ಉಪ್ಪನ್ನು ಹಾಕಿ ಅದರ ಮೇಲೆ ಒಂದು ಚಿಕ್ಕ ತಟ್ಟೆ ಇಟ್ಟು ಆಮೇಲೆ ಕುಕ್ಕೀಸ್ ಮಾಡಿಟ್ಟುಕೊಂಡ ಪ್ಲೇಟ್ ಅನ್ನು ಇಡಿ. ಕುಕ್ಕರ್ ನ ವಿಷಲ್, ಹಾಗೂ ಗ್ಯಾಸ್ಕೆಟ್ ಅನ್ನು ತೆಗೆಯಬೇಕು. ½ ಗಂಟೆ ಬೇಯಿಸಿಕೊಂಡರೆ ಕುಕ್ಕರ್ ನಲ್ಲಿಯೂ ರುಚಿಯಾದ ಕುಕ್ಕೀಸ್ ಮಾಡಬಹುದು.