ಸಂಜೆ ಸಮಯಕ್ಕೆ ಟೀ ಯೊಂದಿಗೆ ಬಜ್ಜಿ – ಬೋಂಡ ಇದ್ದರೆ ಹೇಗೆ ಚೆನ್ನಾಗಿರುತ್ತದೋ ಹಾಗೇ ಕೇಕ್ ಕೂಡ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಕ್ರೀಂ ಹಾಕದೆ ಮಾಡುವ ಸ್ಪಾಂಜ್ ಕೇಕ್, ಟೀ ಜತೆಗೆ ಸವಿಯುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಒಂದು ಬೌಲ್ ಹಾಲು ತೆಗೆದಿಟ್ಟುಕೊಳ್ಳಿ. ಇದರಿಂದ ಒಂದು ಚಮಚ ಹಾಲನ್ನು ಇನ್ನೊಂದು ಬೌಲ್ ಗೆ ತೆಗೆದುಕೊಂಡು ಅದಕ್ಕೆ 3 ಹನಿ ಲಿಂಬೆಹಣ್ಣಿನ ರಸ ಸೇರಿಸಿ. ನಂತರ ದೊಡ್ಡದೊಂದು ಬೌಲ್ ಗೆ 1.5 ಕಪ್ ಸಕ್ಕರೆ ಪುಡಿ ಹಾಕಿ ಅದಕ್ಕೆ ಲಿಂಬೆರಸ ಸೇರಿಸಿದ ಹಾಲು, ಹಾಗೂ ಬೌಲ್ ನಲ್ಲಿದ್ದ ಉಳಿದ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಎಣ್ಣೆ ಹಾಕಿ ಮಿಕ್ಸ್ ಮಾಡಿ.
ಸಕ್ಕರೆ ಚೆನ್ನಾಗಿ ಕರಗಲಿ. ಇದಕ್ಕೆ 4 ಕಪ್ ಮೈದಾ ಹಿಟ್ಟು, ಚಿಟಿಕೆ ಉಪ್ಪು, ½ ಟೀ ಸ್ಪೂನ್ ಬೇಕಿಂಗ್ ಪೌಡರ್, ¼ ಟೀ ಸ್ಪೂನ್ ಬೇಕಿಂಗ್ ಸೋಡಾ, 1 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ, ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ಹಾಲು ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಇದನ್ನು ತುಪ್ಪ ಸವರಿದ ಕೇಕ್ ಮೌಲ್ಡ್ ಗೆ ಹಾಕಿ ಪ್ರಿ ಹೀಟ್ ಮಾಡಿಟ್ಟುಕೊಂಡ ಒವೆನ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಿಕೊಂಡರೆ ಸ್ಪಾಂಜ್ ಕೇಕ್ ರೆಡಿ.