alex Certify ಟಾಟಾ ಆಲ್ಟ್ರೋಜ್​ CNG ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಆಲ್ಟ್ರೋಜ್​ CNG ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಾರು ಬೇಡಿಕೆಯನ್ನು ಪೂರೈಸಲು ಟಾಟಾ ಮೋಟಾರ್ಸ್​ ತಮ್ಮ ವಾಹನವನ್ನು ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸುತ್ತದೆ. ಹೊಸ ಹೊಸ ಎಡಿಷನ್​ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ವರದಿಯ ಪ್ರಕಾರ, ಟಾಟಾ ಮೋಟಾರ್ಸ್​ ಮುಂದಿನ ದಿನಗಳಲ್ಲಿ ಹೊಸ ಟಾಟಾ ಆಲ್ಟ್ರೋಜ್​ ಸಿ.ಎನ್.​ಜಿ. ಎಡಿಷನ್​ ಹೊರತರಲು ಸಜ್ಜಾಗುತ್ತಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ನಡೆದಿದೆ. ಮಾರುತಿ ಸುಜುಕಿ ಇತ್ತೀಚೆಗೆ ಮಾರುತಿ ಸುಜುಕಿ ಸ್ವಿಫ್ಟ್​ ಎಸ್​- ಸಿಎನ್​ಜಿ ರೂಪಾಂತರವನ್ನು ಹೊರತರುವ ಮೂಲಕ ಗಮನ ಸೆಳೆದಿತ್ತು.

ಪ್ರಸ್ತುತ, ಟಾಟಾ ಟಿಯಾಗೊ ಮತ್ತು ಟಾಟಾ ಟಿಗೊರ್​ ಟಾಟಾ ಮೋಟಾರ್ಸ್​ ಪೋರ್ಟ್​ಫೋಲಿಯೊದಲ್ಲಿ ಸಿ.ಎನ್.​ಜಿ. ರೂಪಾಂತರದೊಂದಿಗೆ ಲಭ್ಯವಿದೆ. ಇದೇ ಬೆಳವಣಿಗೆ ಮುಂದುವರಿದರೆ ಸುರಕ್ಷತೆ ಮತ್ತು ಬಾಳಿಕೆಯ ಉನ್ನತ ಗುಣಮಟ್ಟದಿಂದಾಗಿ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಟಾಟಾ ನೆಕ್ಸಾನ್​ ಮತ್ತು ಟಾಟಾ ಪಂಚ್​ ರಿಯಲ್​ನ ಸಿ.ಎನ್.​ಜಿ. ರೂಪಾಂತರಗಳನ್ನು ಸಹ ಶೀಘ್ರದಲ್ಲೇ ನೋಡಬಹುದು.

ಪೆಟ್ರೋಲ್​ ಆವೃತ್ತಿಗಳಲ್ಲಿ ಕಂಡುಬರುವ ಎಲ್ಲಾ ಅನುಕೂಲತೆಗಳು ಸಿ.ಎನ್​.ಜಿ. ಆಲ್ಟ್ರೊಜ್​ನಲ್ಲಿ ಸಹ ಲಭ್ಯವಾಗುತ್ತದೆ. ಕಾರಿನ ಪ್ರಾಥಮಿಕ ವೈಶಿಷ್ಟ್ಯಗಳಲ್ಲಿ ಲೆದರ್​ನಿಂದ ಆವೃತವಾದ ಸ್ಟೀರಿಂಗ್​, 7-ಇಂಚಿನ ಡಿಜಿಟಲ್​ ಇನ್ಸ್ಟ್ರುಮೆಂಟ್​ ಕ್ಲಸ್ಟರ್​, ಇನ್ಫೋಟೈನ್​ಮೆಂಟ್​ ಸಿಸ್ಟಮ್​ ಸೇರಿವೆ. ಕ್ರೂಸ್​ ಕಂಟ್ರೋಲ್​, ಆಂಬಿಯೆಂಟ್​ ಲೈಟಿಂಗ್​, ಸೆಮಿ- ಡಿಜಿಟಲ್​ ಇನ್ಸ್ಟ್ರುಮೆಂಟ್​ ಕ್ಲಸ್ಟರ್​ ಮತ್ತು ಐಆರ್​ಎ ಲಿಂಕ್ಡ್​ ವೆಹಿಕಲ್​ ಟೆಕ್ನಾಲಜಿ ಇತರ ವೈಶಿಷ್ಟ್ಯಗಳಲ್ಲಿ ಸೇರಿವೆ.

ಪೆಟ್ರೋಲ್​ ಆವೃತ್ತಿಗೆ ಹೋಲಿಸಿದರೆ ಸಿ.ಎನ್​.ಜಿ. ರೂಪಾಂತರವು ಕಡಿಮೆ ಕಾರ್ಯಕ್ಷಮತೆ ಹೊಂದಿರುತ್ತದೆ. 1.2-ಲೀಟರ್​ ಟರ್ಬೊ ಪೆಟ್ರೋಲ್​ ಎಂಜಿನ್​ ಗರಿಷ್ಠ 110 ಪಿಎಸ್​ ಪವರ್​ ಔಟ್​ಪುಟ್​ ಮತ್ತು 140 ಎನ್​ಎಂ ಗರಿಷ್ಠ ಟಾರ್ಕ್​ ಅನ್ನು ಹೊಂದಿದೆ. ಸಿ.ಎನ್.​ಜಿ. ಖರೀದಿದಾರರಿಗೆ 10-15 ಪಿಎಸ್​ನ ಕುಸಿತವನ್ನು ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...