alex Certify ಜ್ವಾಲಾಮುಖಿ ಸ್ಫೋಟದ ಬಳಿಕ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವಾಲಾಮುಖಿ ಸ್ಫೋಟದ ಬಳಿಕ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ….!

ರೋಮ್: ಎಟ್ನಾ ಪರ್ವತದ ಪ್ರಬಲ ಸ್ಫೋಟವು ಜ್ವಾಲಾಮುಖಿ ಗುಡುಗು ಸಹಿತ ಮಳೆಯನ್ನು ಸೃಷ್ಟಿಸಿದೆ, ಇದು ಇಟಲಿಯ ಪೂರ್ವ ಸಿಸಿಲಿಯ ಮೇಲೆ ಆಕಾಶದಾದ್ಯಂತ ಸಿನಿಮೀಯ ರೀತಿಯಲ್ಲಿ ಮಿಂಚಿನ ಸಂಚಾರ ಮಾಡಿದೆ.

ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಜಿಯೋಫಿಸಿಕ್ಸ್ ಮತ್ತು ಜ್ವಾಲಾಮುಖಿ ತಜ್ಞರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಇಂತಹ ಜ್ವಾಲಾಮುಖಿ ಬಿರುಗಾಳಿಗಳು ತುಂಬಾನೇ ಅಪರೂಪ. ಆದರೆ ವಿಶೇಷ ಸಂದರ್ಭಗಳಲ್ಲಿ ಸಮುದ್ರಗಳ ಸಮೀಪ ಇಂತಹ ಜ್ವಾಲಾಮುಖಿ ಬಿರುಗಾಳಿ ಸಂಭವಿಸಬಹುದು ಎಂದು ಹೇಳಿದ್ದಾರೆ.

ಇಟಲಿಯ ಸಿಸಿಲಿ ಮೌಂಟ್​​ ಎಟ್ನಾದಲ್ಲಿ ಈ ಜ್ವಾಲಾಮುಖಿ ಗುಡುಗು ಸಂಭವಿಸಿದೆ. ಜ್ವಾಲಾಮುಖಿ ತಜ್ಞ ಬೋರಿಸ್​ ಬೆಹ್ನೆ ನೀಡಿರುವ ಮಾಹಿತಿಯ ಪ್ರಕಾರ ಎಟ್ನಾದಲ್ಲಿ ಕಳೆದ ವರ್ಷ ಕೂಡ ಜ್ವಾಲಾಮುಖಿ ಮಿಂಚು ಉಂಟಾಗಿತ್ತು. ಇದಕ್ಕೂ ಮುನ್ನ ಅಂದರೆ 2015ರಲ್ಲಿ ಇದು ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...