
ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಜಿಯೋಫಿಸಿಕ್ಸ್ ಮತ್ತು ಜ್ವಾಲಾಮುಖಿ ತಜ್ಞರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಇಂತಹ ಜ್ವಾಲಾಮುಖಿ ಬಿರುಗಾಳಿಗಳು ತುಂಬಾನೇ ಅಪರೂಪ. ಆದರೆ ವಿಶೇಷ ಸಂದರ್ಭಗಳಲ್ಲಿ ಸಮುದ್ರಗಳ ಸಮೀಪ ಇಂತಹ ಜ್ವಾಲಾಮುಖಿ ಬಿರುಗಾಳಿ ಸಂಭವಿಸಬಹುದು ಎಂದು ಹೇಳಿದ್ದಾರೆ.
ಇಟಲಿಯ ಸಿಸಿಲಿ ಮೌಂಟ್ ಎಟ್ನಾದಲ್ಲಿ ಈ ಜ್ವಾಲಾಮುಖಿ ಗುಡುಗು ಸಂಭವಿಸಿದೆ. ಜ್ವಾಲಾಮುಖಿ ತಜ್ಞ ಬೋರಿಸ್ ಬೆಹ್ನೆ ನೀಡಿರುವ ಮಾಹಿತಿಯ ಪ್ರಕಾರ ಎಟ್ನಾದಲ್ಲಿ ಕಳೆದ ವರ್ಷ ಕೂಡ ಜ್ವಾಲಾಮುಖಿ ಮಿಂಚು ಉಂಟಾಗಿತ್ತು. ಇದಕ್ಕೂ ಮುನ್ನ ಅಂದರೆ 2015ರಲ್ಲಿ ಇದು ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ.