
ಹೌದು, ಉತ್ತರ ಪ್ರದೇಶದ ಈ ಜೈಲಿನಲ್ಲಿ ಖೈದಿಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ. ಬಾರಾಬಂಕಿ ಜೈಲಿನಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಂ ಖೈದಿಗಳು ಒಟ್ಟಾಗಿ ಉಪವಾಸ ಮುರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಜೈಲು ಆಡಳಿತ ಸಿಬ್ಬಂದಿಯೇ ಇಫ್ತಾರ್ ಕೂಟ ಆಯೋಜಿಸಿದ್ದರು.
ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿವಿಧ ಧರ್ಮಗಳ ನಡುವಿನ ಈ ಸಾಮರಸ್ಯವನ್ನು ಕಂಡು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಏಕತೆಯ ಶಕ್ತಿ ಅಂತೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮಂಕಾದ ಕಾಲದಲ್ಲಿ ಹೊರಗಿಗಿಂತ ಜೈಲಿನಲ್ಲಿ ಹೆಚ್ಚು ಮಾನವೀಯತೆ ಉಳಿದಿದೆ ಎಂದು ತೋರುತ್ತದೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.