alex Certify ಜೈಲಿನಲ್ಲಿ ಅತಿಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಲ್ಲಿ ಅತಿಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋ ವೈರಲ್

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಜೈಲಿನಲ್ಲಿ ಮಾಜಿ ಸಂಸದ ಮತ್ತು ಯುಪಿ ಮಾಫಿಯಾ ನಾಯಕ ಅತೀಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಜೈಲಿನಲ್ಲಿ ಅತಿಕ್ ಅಹ್ಮದ್ ಹೋಳಿ ಆಡುತ್ತಿರುವ ಫೋಟೋ ವೈರಲ್ ಆದ ಬಳಿಕ ಇದನ್ನು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೈಲಿನಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಜೈಲು ಅಧಿಕಾರಿಗಳ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗಿದೆ. ಅತೀಕ್ ಅಹ್ಮದ್ ಸಬರಮತಿ ಜೈಲಿನಲ್ಲಿ ಹೋಳಿ ಆಡಿಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜೈಲಿನ ಆವರಣದಲ್ಲಿ ಹೋಳಿ ಆಡಲು ಯಾರಿಗೂ ಅವಕಾಶವಿಲ್ಲ. ಅತೀಕ್ ಅಹ್ಮದ್ ನನ್ನು ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿ ಇರಿಸಲಾಗಿದೆ. ಹಾಗೂ 24 ಗಂಟೆಗಳ ಪೊಲೀಸ್ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...