ಹದಿನಾರು ವರ್ಷದ ಬಾಲಕಿ ಜೈಂಟ್ ವೀಲ್ ನಲ್ಲಿ ಆಡುವಾಗ ಆಕಸ್ಮಿಕವಾಗಿ ಆಕೆಯ ಕೂದಲು ಚಕ್ರಕ್ಕೆ ಸಿಲುಕಿದ್ದು, ಇದರ ಪರಿಣಾಮ ಚರ್ಮ ಸಹಿತವಾಗಿ ತಲೆಕೂದಲು ವಿಗ್ ರೀತಿಯಲ್ಲಿ ಹೊರಬಂದಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂತಹದೊಂದು ದುರಂತ ನಡೆದಿದ್ದು, ಶ್ರೀರಂಗನಾಥ ಸ್ವಾಮಿ ಜಾತ್ರೆಯಲ್ಲಿ ಹಾಕಲಾಗಿದ್ದ ಜೈಂಟ್ ವೀಲ್ ನಲ್ಲಿ ಬೆಂಗಳೂರಿನ 16 ವರ್ಷದ ಶ್ರೀ ವಿದ್ಯಾ ಎಂಬ ಬಾಲಕಿ ಆಟವಾಡುತ್ತಿದ್ದಳು.
ಈ ವೇಳೆ ಆಕೆಯ ತಲೆಕೂದಲು ಆಕಸ್ಮಿಕವಾಗಿ ಚಕ್ರಕ್ಕೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.