
ಕೀರ್ತಿ ನಿರ್ದೇಶನದ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಅದೊಂದಿತ್ತು ಕಾಲ’ ಸಿನಿಮಾ ಚಿತ್ರೀಕರಣವನ್ನು ಜುಲೈ 15ರಿಂದ ಪುನಾರಂಭ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಅದಿತಿ ಪ್ರಭುದೇವ ಸುಮಾರು 10 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ 5 ಚಿತ್ರಗಳು ಇನ್ನೇನು ತೆರೆಮೇಲೆ ಬರಲು ಸಜ್ಜಾಗಿವೆ.
ಅಗಲಿದ ಮೇರು ನಟ ದಿಲೀಪ್ ಕುಮಾರ್ಗೆ ಹೃದಯಸ್ಪರ್ಶಿ ನಮನ ಸಲ್ಲಿಸಿದ ಅನಿಲ್ ಕಪೂರ್
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ನಿಶಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಿತ್ತು ಕೊರೊನಾ ಕಾರಣದಿಂದ ಶೂಟಿಂಗ್ ನಿಲ್ಲಿಸಬೇಕಾಯಿತು. ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
