
ಈ ಸಾಹಸಮಯ ದೃಶ್ಯವನ್ನು ಕಂಡ ನೆಟ್ಟಿಗರು ಪೊಲೀಸ್ ಪೇದೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಆಗ್ರಾದ ಬರ್ಹಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಶೇರ್ ಸಿಂಹ್ ಶುಕ್ರವಾರ ಮಧ್ಯಾಹ್ನ ಎತ್ಮಾದ್‌ಪುರದ ರೈಲ್ವೆ ನಿಲ್ದಾಣದ ಬಳಿ ಜೌಗು ಪ್ರದೇಶದಲ್ಲಿ ಸಿಲುಕಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸ್ವೀಕರಿಸಿದರು.ಆತನನ್ನು ಬ್ರಜೇಶ್ ಕುಮಾರ್ ಎಂದು ಗುರುತಿಸಲಾಗಿದೆ, ಆ ವ್ಯಕ್ತಿಗೆ ಚಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ಹೇಳಿದರು.
ಘಟನಾ ಸ್ಥಳವನ್ನು ತಲುಪಿದ ಬಳಿಕ ಪೊಲೀಸ್ ಪೇದೆ ಸಂದೇಶ್ ಕುಮಾರ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಜೌಗು ಪ್ರದೇಶದತ್ತ ತೆರಳಿದ್ದಾರೆ. ಆ ವ್ಯಕ್ತಿಯನ್ನು ಹಿಡಿದ ಕುಮಾರ್ ಪೊಲೀಸರು ಹಗ್ಗ ಜಗ್ಗುತ್ತಿದ್ದಂತೆಯೇ ಸುರಕ್ಷಿತವಾಗಿ ಈತನನ್ನು ಹೊರಗೆ ಕರೆ ತಂದರು ಎಂದು ಶೇರ್ ಸಿಂಗ್ ಹೇಳಿದ್ದಾರೆ. ವ್ಯಕ್ತಿಯನ್ನು ಇದೀಗ ಚಿಕಿತ್ಸೆಗಾಗಿ ಎತ್ಮಾದಪುರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.