alex Certify ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಕಾಡುತ್ತೆ ಈ ಎಲ್ಲಾ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ಕಾಡುತ್ತೆ ಈ ಎಲ್ಲಾ ಸಮಸ್ಯೆ

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿಲ್ಲದಿದ್ದರೆ ಗ್ಯಾಸ್, ವಾಂತಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆ ಕಾಣಿಸುತ್ತದೆ. ಪದೇ ಪದೇ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಹಾಳಾಗುತ್ತದೆ. ಆ ವೇಳೆ ನಿಮಗೆ ಕೆಲವು ದೈಹಿಕ ಚಿಹ್ನೆಗಳು, ರೋಗಲಕ್ಷಣಗಳು ಕಂಡುಬರುತ್ತದೆ.

ಚರ್ಮ : ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಯಾದರೆ ನಿಮ್ಮ ಚರ್ಮದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಸೋರಿಯಾಸಿಸ್, ಮೊಡವೆ ಅಥವಾ ಎಕ್ಸಿಮಾದಂತಹ ಸಮಸ್ಯೆಗಳು ಕಂಡುಬರುತ್ತದೆ.

ಕೂದಲು : ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯಿಂದ ಕೂದಲು ದುರ್ಬಲವಾಗುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಕಳಪೆ ಜೀರ್ಣಕ್ರಿಯೆಯಿಂದ ಆಹಾರದ ಸರಿಯಾದ ಪೋಷಣೆ ಕೂದಲಿನ ಬುಡಕ್ಕೆ ತಲುಪುವುದಿಲ್ಲ. ಇದರಿಂದ ಕೂದಲಿನ ಸಮಸ್ಯೆಗಳು ಕಾಡುತ್ತವೆ.

ಕರುಳಿನ ತೊಂದರೆ : ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಾಗ ದೇಹದಿಂದ ವಿಷ ಹೊರಗೆ ಹೋಗುವುದಿಲ್ಲ. ಇದರಿಂದ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆಯುಬ್ಬರ, ಹೊಟ್ಟೆ ಭಾರ ಸಮಸ್ಯೆ ಕಾಡುತ್ತದೆ.

ಗ್ಯಾಸ್ ಸಮಸ್ಯೆ : ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಾಗ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಪದೇ ಪದೇ ಅನಿಲವು ಹಾದು ಹೋಗುತ್ತದೆ. ಹೊಟ್ಟೆ ನೋವು ಕಂಡುಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...