alex Certify ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುವ ತರಕಾರಿಗಳನ್ನು ಪ್ರತಿಯೊಬ್ಬರು ಸೇವಿಸಲೇಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುವ ತರಕಾರಿಗಳನ್ನು ಪ್ರತಿಯೊಬ್ಬರು ಸೇವಿಸಲೇಬೇಕು

ಹಲವರಿಗೆ ಕೆಲ ತರಕಾರಿ ಅಂದರೆ ಅದೇನೋ ಅಸಡ್ಡೆ. ಅದು ಬೇಡ, ಇದನ್ನು ತಿನ್ನಲ್ಲ, ಈ ತರಕಾರಿ ಇಷ್ಟ ಇಲ್ಲ ಅಂತ ಹೇಳುವವರು ಈ ಲಿಸ್ಟ್ ನಲ್ಲಿರುವ ತರಕಾರಿಗಳನ್ನು ಸೇವಿಸಬೇಕು. ಯಾಕೆ ಗೊತ್ತಾ…ಹಸಿರು ಬಟಾಣಿ

ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‌ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ನೆರವು ಮಾಡುತ್ತವೆ.

ಬೀನ್ಸ್‌

ಇದರಲ್ಲಿ ವಿಟಮಿನ್‌ ಬಿ ಹಾಗೂ ಬೀಟಾ-ಕೆರೊಟಿನ್‌ ಅಧಿಕ ಪ್ರಮಾಣದಲ್ಲಿರುತ್ತದೆ.

ಪಾಲಕ್‌ ಸೊಪ್ಪು

ಈ ಸೊಪ್ಪಿನಲ್ಲಿ ಪೊಟಾಶಿಯಂ, ಸತು, ವಿಟಮಿನ್‌ ಕೆ, ಇ, ಮತ್ತು ಎ ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕ್ಯಾನ್ಸರನ್ನು ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ.

ಬೀಟ್‌ರೂಟ್‌

ರಕ್ತ ಪರಿಚಲನೆ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ.

ಎಲೆಕೋಸು

ಎಲೆಕೋಸಿನಲ್ಲಿರುವ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್‌ ಕೋಶಗಳ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರಾಡಿಕಲ್‌ಗಳನ್ನು ನಿವಾರಣೆ ಮಾಡುತ್ತದೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಇದರಲ್ಲಿ ಕ್ಯಾನ್ಸರ್‌ ತಡೆಯುವ ನೈಸರ್ಗಿಕ ರಾಸಾಯನಿಕ ಗುಣಗಳು ಇವೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಅಂಶಗಳು ಕರುಳು ಕ್ಯಾನ್ಸರ್‌, ಹೊಟ್ಟೆ, ಕಿಡ್ನಿ , ಅನ್ನನಾಳ, ಬಾಯಿ, ಗರ್ಭಕೋಶ, ಯಕೃತ್‌ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ ಅನ್ನು ತಡೆಯುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...