alex Certify ಜಿಯೋ ಬಳಕೆದಾರರಿಗೆ ಬಂಪರ್; ಗ್ರಾಹಕರನ್ನು ಸೆಳೆಯುತ್ತಿದೆ ಹೊಸ ಪ್ಲಾನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಬಳಕೆದಾರರಿಗೆ ಬಂಪರ್; ಗ್ರಾಹಕರನ್ನು ಸೆಳೆಯುತ್ತಿದೆ ಹೊಸ ಪ್ಲಾನ್‌

ಕಡಿಮೆ ದರದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸ್ತಾ ಇರೋ ಟೆಲಿಕಾಂ ಸಂಸ್ಥೆಗಳ ಪೈಕಿ ರಿಲಯನ್ಸ್‌ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋ ಅದ್ಭುತವಾದ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಇಂಟರ್ನೆಟ್‌ ಸೇವೆ ಕೂಡ ಒದಗಿಸ್ತಾ ಇರೋದು ವಿಶೇಷ.

ಜಿಯೋದ ಹೊಸ ಪ್ಲಾನ್‌ನಲ್ಲಂತೂ 3GB ಇಂಟರ್ನೆಟ್ ಮತ್ತು OTT ಸದಸ್ಯತ್ವದಂತಹ ಅನೇಕ ಪ್ರಯೋಜನಗಳಿವೆ. ಇದರ ಬೆಲೆ 100 ರೂಪಾಯಿಗಿಂತಲೂ ಕಡಿಮೆ ಅನ್ನೋದು ಮತ್ತೊಂದು ವಿಶೇಷ. ಜಿಯೋ 91 ರೂಪಾಯಿಯ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹಲವು ಆಕರ್ಷಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಪ್ಲಾನ್‌ಗೆ 28 ದಿನಗಳ ವ್ಯಾಲಿಡಿಟಿ ಇದೆ.

ಗ್ರಾಹಕರಿಗೆ 3GB ಹೈ ಸ್ಪೀಡ್ ಇಂಟರ್ನೆಟ್ ದೊರೆಯುತ್ತದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 50 SMS ಸೌಲಭ್ಯವನ್ನು ಸಹ ಪಡೆಯಬಹುದು. ಜಿಯೋದ 91 ರೂಪಾಯಿ ಪ್ಲಾನ್‌ ರೀಚಾರ್ಜ್‌ ಮಾಡಿಕೊಂಡರೆ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನಂತಹ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಸಬ್‌ಸ್ಕ್ರಿಪ್ಷನ್‌ ದೊರೆಯುತ್ತದೆ. ಆದ್ರೆ ಈ ಪ್ಲಾನ್‌ ಎಲ್ಲಾ ಗ್ರಾಹಕರಿಗೆ ಲಭ್ಯವಿಲ್ಲ. ಈ ಯೋಜನೆಯನ್ನು ಬಳಸಲು, ನೀವು JioPhone ಅನ್ನು ಹೊಂದಿರಬೇಕು. ವಿಶೇಷವಾಗಿ ಜಿಯೋ ಫೋನ್‌ ಬಳಕೆದಾರರಿಗಾಗಿಯೇ ಈ ಪ್ಲಾನ್‌ ಅನ್ನು ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...