
ರಸ್ತೆಯನ್ನು ದಾಟಬೇಕೆಂದು ಜಿಂಕೆ ಈ ರೀತಿ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾರಿದೆ. ಸ್ಲೋ ಮೋಷನ್ನಲ್ಲಿ ಶೂಟ್ ಮಾಡಲಾದ ವಿಡಿಯೋದಲ್ಲಿ ಜಿಂಕೆಯು ಹಾರುವಾಗ ಎಷ್ಟು ಎತ್ತರ ಹಾಗೂ ದೂರವನ್ನು ಕ್ರಮಿಸಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಇದು ನೋಡೋದಕ್ಕೆ ಆಕಾಶದಲ್ಲಿ ಜಿಂಕೆ ಹಾರುತ್ತಿರುವಂತೆ ಭಾಸವಾಗುತ್ತಿದೆ. ಅಷ್ಟು ಎತ್ತರದಲ್ಲಿ ಹಾರಿದ್ದರೂ ಸಹ ಜಿಂಕೆಯು ಸುರಕ್ಷಿತವಾಗಿ ನೆಲದ ಮೇಲೆ ಕಾಲಿಟ್ಟಿದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು ಉದ್ದ ಹಾಗೂ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಸಿಗುತ್ತಿದೆ……. ಎಂದು ಶೀರ್ಷಿಕೆ ನೀಡಲಾಗಿದೆ.