ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಉಗ್ರರ ಟಾರ್ಗೆಟ್ ಆಗಿದೆಯೇ ಎಂಬ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಜಾಲಹಳ್ಳಿ ವಾಯುನೆಲೆ ಮೇಲೆ ಡ್ರೋನ್ ಹಾರಾಟ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಗಂಗಮ್ಮನ ಗುಡಿ ಪೊಲೀಸರು ವಾಯುನೆಲೆಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ವಾಯುನೆಲೆ ಮೇಲೆ ಡ್ರೋಣ್ ಹಾರಾಟ ನಡೆಸಿರುವ ಅನುಮಾನವಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲ ವಾಯುನೆಲೆ ಅಧಿಕಾರಿಗಳು ಹಾಗೂ ಪೊಲೀಸರು ಗಸ್ತು ನಡೆಸಿದ್ದಾರೆ.
ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್
ಗಸ್ತಿನ ವೇಳೆ ಯಾವುದೇ ಡ್ರೋಣ್ ಹಾರಾಟ ನಡೆದಿಲ್ಲ ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ಸ್ಥಳೀಯ ಡ್ರೋಣ್ ಏಜೆನ್ಸಿಗಳನ್ನು ವಿಚಾರಿಸಿದ್ದು, ಏಜೆನ್ಸಿಗಳೂ ಸದ್ಯ ಯಾವುದೇ ಡ್ರೋಣ್ ಹಾರಾಟ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಆದರೆ ವಾಯುನೆಲೆ ಮೇಲೆ ಕೆಲ ದಿನಗಳ ಹಿಂದೆ ಡ್ರೋಣ್ ಹಾರಾಟ ನಡೆಸಿರುವ ಶಂಕೆ ಇದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.