alex Certify ಜಾರಕಿಹೊಳಿ ಬ್ರದರ್ಸ್ ಗೆ ಬಿಗ್ ಶಾಕ್: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸವದಿ –ಕತ್ತಿ ಬಣದ ಮೇಲುಗೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರಕಿಹೊಳಿ ಬ್ರದರ್ಸ್ ಗೆ ಬಿಗ್ ಶಾಕ್: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸವದಿ –ಕತ್ತಿ ಬಣದ ಮೇಲುಗೈ

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಉಪ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಮತ್ತು ಉಮೇಶ ಕತ್ತಿ ಆಪ್ತರಿಗೆ ಜಯ ಸಿಕ್ಕಿದೆ. ಜಾರಕಿಹೊಳಿ ಸೋದರರಿಗೆ ಹಿನ್ನಡೆಯಾಗಿದೆ.

ಲಕ್ಷ್ಮಣ ಸವದಿ ಅವರ ಆಪ್ತ ಸಂಜು ಆವಕ್ಕನವರ ಜಯಗಳಿಸಿದ್ದಾರೆ. ಸವದಿ ಬಣದಿಂದ ಸ್ಪರ್ಧಿಸಿದ್ದ ಸಂಜು 10 ಮತಗಳ ಪೈಕಿ 6 ಮತಪಡೆದುಕೊಂಡಿದ್ದಾರೆ. ಈ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಸೋದರರಿಗೆ ಹಿನ್ನಡೆಯಾಗಿದೆ.

ಜಾರಕಿಹೊಳಿ ಬ್ರದರ್ಸ್ ಬಣದಿಂದ ಇಬ್ಬರು ಸ್ಪರ್ಧಿಸಿದ್ದು, 10 ಮತಗಳ ಪೈಕಿ 4 ಮತಗಳನ್ನು ಫತೇಸಿಂಹ ಜಗತಾಪ ಪಡೆದುಕೊಂಡಿದ್ದಾರೆ. ರವೀಂದ್ರ ಯಲಿಗಾರ ಅವರಿಗೆ ಯಾರೊಬ್ಬರೂ ಮತ ಹಾಕಿಲ್ಲ. ಜಾರಕಿಹೊಳಿ ಬಣದಿಂದ ಫತೇಸಿಂಹ,  ರವೀಂದ್ರ ಕಣಕ್ಕಿಳಿದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...