
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಉಪ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಮತ್ತು ಉಮೇಶ ಕತ್ತಿ ಆಪ್ತರಿಗೆ ಜಯ ಸಿಕ್ಕಿದೆ. ಜಾರಕಿಹೊಳಿ ಸೋದರರಿಗೆ ಹಿನ್ನಡೆಯಾಗಿದೆ.
ಲಕ್ಷ್ಮಣ ಸವದಿ ಅವರ ಆಪ್ತ ಸಂಜು ಆವಕ್ಕನವರ ಜಯಗಳಿಸಿದ್ದಾರೆ. ಸವದಿ ಬಣದಿಂದ ಸ್ಪರ್ಧಿಸಿದ್ದ ಸಂಜು 10 ಮತಗಳ ಪೈಕಿ 6 ಮತಪಡೆದುಕೊಂಡಿದ್ದಾರೆ. ಈ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಸೋದರರಿಗೆ ಹಿನ್ನಡೆಯಾಗಿದೆ.
ಜಾರಕಿಹೊಳಿ ಬ್ರದರ್ಸ್ ಬಣದಿಂದ ಇಬ್ಬರು ಸ್ಪರ್ಧಿಸಿದ್ದು, 10 ಮತಗಳ ಪೈಕಿ 4 ಮತಗಳನ್ನು ಫತೇಸಿಂಹ ಜಗತಾಪ ಪಡೆದುಕೊಂಡಿದ್ದಾರೆ. ರವೀಂದ್ರ ಯಲಿಗಾರ ಅವರಿಗೆ ಯಾರೊಬ್ಬರೂ ಮತ ಹಾಕಿಲ್ಲ. ಜಾರಕಿಹೊಳಿ ಬಣದಿಂದ ಫತೇಸಿಂಹ, ರವೀಂದ್ರ ಕಣಕ್ಕಿಳಿದಿದ್ದರು.