ಜಾಮೀನು ಪಡೆದ 4 ದಿನಗಳಲ್ಲಿ, ಹೊರಗೆ ಬಂದು ಮತ್ತೆ ತನ್ನ ಚಾಳಿ ಬಿಡದೆ ಕಾರ್ ಕಳ್ಳತನ ಮಾಡುವ ವೇಳೆ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಸುಮಾರು ಮೂರು ಗಂಟೆಗಳ ಕಾಲ, ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ 200 ಕಿಲೋಮೀಟರ್ ವರೆಗೆ ಚೇಸ್ ಮಾಡಿ ಪೊಲೀಸರು ಆರೋಪಿ ಧೀರಜ್ ಕುಮಾರ್ ನನ್ನ ಬಂಧಿಸಿದ್ದಾರೆ. ಆತನನ್ನ ಹಿಡಿಯಲು ಪೊಲೀಸ್ ಪೇದೆ ಯತ್ನಿಸುತ್ತಿದ್ದಾಗ ಕಾರಿನೊಂದಿಗೆ ಎಳೆದೊಯ್ದಿದ್ದಾನೆ.
BIG BREAKING: ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾದ ಬೆನ್ನಲ್ಲೇ BSY ಮಹತ್ವದ ಹೇಳಿಕೆ; ವಿಧೇಯಕಕ್ಕೆ RSS ಸಹಕಾರವೂ ಇದೆ
ಆರೋಪಿ ತಪ್ಪಿಸಿಕೊಳ್ಳುವ ವೇಳೆ ಇಬ್ಬರಿಗೆ ಗಾಯಗಳಾಗಿವೆ. ಕಳೆದ ನಾಲ್ಕು ದಿನಗಳ ಹಿಂದೆ ಬೇರೊಂದು ಪ್ರಕರಣದಲ್ಲಿ ಜೈಲಿನಿಂದ ಜಾಮೀನು ಪಡೆದಿದ್ದ. ಇನ್ನೂ ಈ ಬಗ್ಗೆ ಮಾತನಾಡಿದ, ಪೊಲೀಸ್ ಅಧೀಕ್ಷಕ ಸತ್ಯಜೀತ್ ಗುಪ್ತಾ, ಗ್ರೇಟರ್ ನೋಯ್ಡಾದ ಪರಿ ಚೌಕ್‌ನಿಂದ ಹೋಂಡಾ ಅಮೇಜ್ ಕಾರ್ ಅನ್ನು ಕದ್ದು ಯಮುನಾ ಎಕ್ಸ್‌ಪ್ರೆಸ್‌ವೇ ಕಡೆಗೆ ಹೊರಟಿದ್ದ. ಆಗ ಆಗ್ರಾ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಅವರು ಖಂಡೌಲಿ ಟೋಲ್ ಪ್ಲಾಜಾದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಕಾರಿನ ಕೀಯನ್ನು ತೆಗೆಯಲು ಯತ್ನಿಸಿದ ಪೊಲೀಸ್ ಪೇದೆಯನ್ನು ಕೆಲವು ಮೀಟರ್‌ಗಳಷ್ಟು ಎಳೆದೊಯ್ದಿದ್ದಾನೆ. ಹಾಗೂ ಆರೋಪಿ ಪೊಲೀಸರೊಬ್ಬರ ಮೇಲೆ ದಾಳಿ ನಡೆಸಿದ್ದಾನೆ ಎಂದರು.