
ಅಮೆರಿಕಾ ಸುಪ್ರೀಂ ಕೋರ್ಟ್ ಜಾನ್ಸನ್ & ಜಾನ್ಸನ್ ಕಂಪನಿಗೆ ದೊಡ್ಡ ಹೊಡೆತ ನೀಡಿದೆ. ಜಾನ್ಸನ್ & ಜಾನ್ಸನ್ ಕಂಪನಿ ಮೇಲೆ ಗಂಭೀರ ಆರೋಪ ಮಾಡಿದ್ದ ಮಹಿಳೆಯರಿಗೆ ಕಂಪನಿ, 15500 ಕೋಟಿ ರೂಪಾಯಿ ಪಾವತಿಸಬೇಕಾಗಿದೆ. ಜಾನ್ಸನ್ & ಜಾನ್ಸನ್ ಕಂಪನಿಯ ಬೇಬಿ ಪೌಂಡರ್ ಹಾಗೂ ಟಾಲ್ಕಮ್ ಪೌಂಡರ್ ಬಳಸಿದ್ದರಿಂದ ಗರ್ಭಾಶಯದ ಕ್ಯಾನ್ಸರ್ ಆಗಿದೆ ಎಂದು ಮಹಿಳೆಯರು ಆರೋಪ ಮಾಡಿದ್ದರು.
2018ರಲ್ಲಿ ಸೇಂಟ್ ಲೂಯಿಸ್ ತೀರ್ಪುಗಾರರ ತಂಡ 20 ಮಹಿಳೆಯರ ಅರ್ಜಿ ಪರಿಶೀಲನೆ ನಡೆಸಿ ತೀರ್ಪು ನೀಡಿತ್ತು. ಆದ್ರೆ ಕೋರ್ಟ್ ತನಗೆ ಸರಿಯಾದ ವಾದಕ್ಕೆ ಅವಕಾಶ ನೀಡಿಲ್ಲವೆಂದು ಜಾನ್ಸನ್ & ಜಾನ್ಸನ್ ಆರೋಪ ಮಾಡಿತ್ತು. ಜೊತೆಗೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದ್ರ ವಿಚಾರಣೆ ನಡೆಸಿದ ಕೋರ್ಟ್ ಜಾನ್ಸನ್ & ಜಾನ್ಸನ್ ಅರ್ಜಿ ತಿರಸ್ಕರಿಸಿದೆ. 15500 ಕೋಟಿ ಪಾವತಿ ಮಾಡುವಂತೆ ಸೂಚಿಸಿದೆ.
ಅಮೆರಿಕಾ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ. ಜಾನ್ಸನ್ & ಜಾನ್ಸನ್ ಕಂಪನಿ ಮೇಲೆ ಆರೋಪ ಮಾಡಿದ್ದ ಪ್ರತಿ ಮಹಿಳೆಗೆ 182 ಕೋಟಿ ರೂಪಾಯಿ ಸಿಗಲಿದೆ. ಜೊತೆಗೆ ಕಂಪನಿಗೆ 400 ಬಿಲಿಯನ್ ಡಾಲರ್ ಪ್ರತ್ಯೇಕ ಹಣ ಪಾವತಿ ಮಾಡಬೇಕಿದೆ.