200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮಾತ್ರವಲ್ಲದೇ ಶಿಲ್ಪಾಶೆಟ್ಟಿ, ಶ್ರದ್ಧಾ ಕಪೂರ್ ಜೊತೆಯಲ್ಲೂ ಸಂಪರ್ಕ ಹೊಂದಿದ್ದ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಸುಕೇಶ್ ಚಂದ್ರಶೇಖರ್ ನೀಡಿರುವ ಹೇಳಿಕೆಯ ಪ್ರಕಾರ ಆತ 2015ರಿಂದ ಶ್ರದ್ಧಾಕಪೂರ್ ಜೊತೆ ಸಂಪರ್ಕ ಹೊಂದಿದ್ದಾರೆ ಹಾಗೂ ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಶೃದ್ಧಾಗೆ ತಾನು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.
ಉಳಿದ ಬಾಲಿವುಡ್ ಸೆಲೆಬ್ರಿಟಿಗಳ ಜೊತೆಯಲ್ಲಿ ಸಂಪರ್ಕ ಇರುವ ಬಗ್ಗೆ ಇಡಿ ಮುಂದೆ ಬಾಯ್ಬಿಟ್ಟಿರುವ ಸುಕೇಶ್ ಚಂದ್ರಶೇಖರ್, ನನಗೆ ನಟ ಹರ್ಮಾನ್ ಬವೇಜಾ ಕೂಡ ಪರಿಚಯಸ್ಥರಾಗಿದ್ದು ಅವರ ಜೊತೆಯಲ್ಲಿ ಕ್ಯಾಪ್ಟನ್ ಎಂಬ ಸಿನಿಮಾವನ್ನು ಸಹ ನಿರ್ಮಾಣ ಮಾಡಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಈ ಸಿನಿಮಾಗೆ ಕಾರ್ತಿಕ್ ಆರ್ಯನ್ರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರಾಜ್ಕುಂದ್ರಾಗೆ ಜಾಮೀನು ನೀಡುವ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಜೊತೆಯೂ ಸಂಪರ್ಕ ಸಾಧಿಸಿದ್ದಾಗಿ ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ ಎನ್ನಲಾಗಿದೆ.