alex Certify ಜನರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಉಕ್ರೇನ್ ನಾಗರಿಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಉಕ್ರೇನ್ ನಾಗರಿಕ…!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದ ಮಧ್ಯೆ, ಉಕ್ರೇನಿಯನ್ ಸೈನಿಕರು ಹಾಗೂ ನಾಗರಿಕರ ಶೌರ್ಯ, ಅದಮ್ಯ ಮನೋಭಾವವನ್ನು ಪ್ರದರ್ಶಿಸುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅಂತಹ ಒಂದು ವಿಡಿಯೋದಲ್ಲಿ ಉಕ್ರೇನಿಯನ್ ವ್ಯಕ್ತಿಯೊಬ್ಬರು ಸ್ಫೋಟಕ ಸಾಧನವನ್ನು ಹಿಡಿದುಕೊಂಡು ದೂರ ತೆರಳಿರುವ ವಿಡಿಯೋ ವೈರಲ್ ಆಗಿದೆ.

ಕಪ್ಪು ಪಫರ್ ಕೋಟ್ ಮತ್ತು ಜೀನ್ಸ್ ಧರಿಸಿರುವ ವ್ಯಕ್ತಿ ಬರ್ಡಿಯಾನ್ಸ್ಕ್‌ನಲ್ಲಿ ರಸ್ತೆಬದಿಯಲ್ಲಿ ಸ್ಫೋಟಕ ವಸ್ತು ಇರುವುದನ್ನು ಗಮನಿಸಿದ್ದಾರೆ. ಉಕ್ರೇನಿಯನ್ ಬಾಂಬ್ ವಿಲೇವಾರಿ ಘಟಕ ಬರುವವರೆಗೂ ಕಾಯುವ ಬದಲು, ಅವರು ಸ್ಫೋಟಕ ಸಾಧನವನ್ನು ಸೇತುವೆಯಿಂದ ದೂರವಿರುವ ರಸ್ತೆಯೊಂದಕ್ಕೆ ಸಾಗಿಸಿದ್ದಾರೆ. ಬಾಯಿಯಲ್ಲಿ ಸಿಗರೇಟ್ ಹಿಡಿದುಕೊಂಡು, ಸ್ಫೋಟಕ ಸಾಧನವನ್ನು ಕೈಯಲ್ಲಿ ಹಿಡಿದು ಅರಣ್ಯದತ್ತ ಒಯ್ದಿದ್ದಾರೆ.

ದಿ ನ್ಯೂ ವಾಯ್ಸ್ ಆಫ್ ಉಕ್ರೇನ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ತನ್ನ ಸುತ್ತಲಿನ ಇತರರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ವ್ಯಕ್ತಿಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

— The New Voice of Ukraine (@NewVoiceUkraine) February 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...