
ಕಪ್ಪು ಪಫರ್ ಕೋಟ್ ಮತ್ತು ಜೀನ್ಸ್ ಧರಿಸಿರುವ ವ್ಯಕ್ತಿ ಬರ್ಡಿಯಾನ್ಸ್ಕ್‌ನಲ್ಲಿ ರಸ್ತೆಬದಿಯಲ್ಲಿ ಸ್ಫೋಟಕ ವಸ್ತು ಇರುವುದನ್ನು ಗಮನಿಸಿದ್ದಾರೆ. ಉಕ್ರೇನಿಯನ್ ಬಾಂಬ್ ವಿಲೇವಾರಿ ಘಟಕ ಬರುವವರೆಗೂ ಕಾಯುವ ಬದಲು, ಅವರು ಸ್ಫೋಟಕ ಸಾಧನವನ್ನು ಸೇತುವೆಯಿಂದ ದೂರವಿರುವ ರಸ್ತೆಯೊಂದಕ್ಕೆ ಸಾಗಿಸಿದ್ದಾರೆ. ಬಾಯಿಯಲ್ಲಿ ಸಿಗರೇಟ್ ಹಿಡಿದುಕೊಂಡು, ಸ್ಫೋಟಕ ಸಾಧನವನ್ನು ಕೈಯಲ್ಲಿ ಹಿಡಿದು ಅರಣ್ಯದತ್ತ ಒಯ್ದಿದ್ದಾರೆ.
ದಿ ನ್ಯೂ ವಾಯ್ಸ್ ಆಫ್ ಉಕ್ರೇನ್ ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ತನ್ನ ಸುತ್ತಲಿನ ಇತರರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ವ್ಯಕ್ತಿಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.