alex Certify ಜನನಿಬಿಡ ರಸ್ತೆಯಲ್ಲೇ ವಿದ್ಯಾರ್ಥಿಯ ಬರ್ಬರ ಹತ್ಯೆ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ ನೀಚ ಕೃತ್ಯದ ದೃಶ್ಯಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನನಿಬಿಡ ರಸ್ತೆಯಲ್ಲೇ ವಿದ್ಯಾರ್ಥಿಯ ಬರ್ಬರ ಹತ್ಯೆ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ ನೀಚ ಕೃತ್ಯದ ದೃಶ್ಯಗಳು…!

ದೆಹಲಿಯ ಮಾಲ್ವಿಯಾ ನಗರದಲ್ಲಿ ಸಾರ್ವಜನಿಕರ ಕಣ್ಣೆದುರಲ್ಲೇ 25 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಮಯಾಂಕ್‌, ಹೋಟೆಲ್‌ ಮ್ಯಾನೇಜ್ಮೆಂಟ್‌ ವಿದ್ಯಾರ್ಥಿಯಾಗಿದ್ದ. ಕೊಲೆಯ ಭೀಕರ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಮಯಾಂಕ್‌ ಮತ್ತವನ ಸ್ನೇಹಿತ ವಿಕಾಸ್‌, ಬೇಗಂಪುರದ ಕ್ವಿಲಾ ಒಂದರಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಕೈಯ್ಯಲ್ಲಿ ಚಾಕು ಹಿಡಿದು ಐದಾರು ಜನರ ಗುಂಪು ಅವರಿದ್ದ ಕಡೆ ಓಡಿ ಬಂದಿದೆ. ಮಯಾಂಕ್‌ ಜೊತೆಗೆ ದುಷ್ಕರ್ಮಿಗಳು ಜಗಳವಾಡಲು ಆರಂಭಿಸಿದ್ದಾರೆ.

ಮಯಾಂಕ್‌ ಅವರನ್ನು ದೂರ ತಳ್ಳಲು ಯತ್ನಿಸಿದ್ದಾನೆ. ಆದ್ರೆ ದುಷ್ಕರ್ಮಿಗಳು ಹಲವು ಬಾರಿ ಆತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಸದಾ ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲೇ ಈ ಬರ್ಬರ ಕೃತ್ಯ ನಡೆದಿದೆ. ವಾಹನ ಸವಾರರೆಲ್ಲ ಈ ಘಟನೆಗೆ ಮೂಕ ಪ್ರೇಕ್ಷಕರಾಗಿದ್ದರು. ಯಾರೊಬ್ಬರೂ ಯುವಕನ ರಕ್ಷಣೆಗೆ ಬಂದಿಲ್ಲ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...