alex Certify ಜನನಿಬಿಡ ರಸ್ತೆಯಲ್ಲಿ ಮಲಗಿ‌ ವಿಡಿಯೋ ಮಾಡುತ್ತಿದ್ದವನು ‌ʼಅಂದರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನನಿಬಿಡ ರಸ್ತೆಯಲ್ಲಿ ಮಲಗಿ‌ ವಿಡಿಯೋ ಮಾಡುತ್ತಿದ್ದವನು ‌ʼಅಂದರ್ʼ

ಜನನಿಬಿಡ ರಸ್ತೆಯಲ್ಲಿನ ಪಾದಚಾರಿಗಳು ದಾಟುವ ಸ್ಥಳದಲ್ಲಿ‌ ಮಲಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಪ್ರಸಂಗ ನಡೆದಿದೆ.

ದುಬೈ ಪೊಲೀಸರು ಮಂಗಳವಾರ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಂಧನ‌ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಜೀವ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ‌.

ವ್ಯಕ್ತಿಯೊಬ್ಬ ರಸ್ತೆಮೇಲೆ ಮಲಗಿದ್ದು, ಈ ಮೂಲಕ ಆತ ತನ್ನ ಜೀವ ಮತ್ತು ಇತರರಿಗೆ ಅಪಾಯಕಾರಿ ಸನ್ನಿವೇಶ ತಂದೊಡ್ಡುತ್ತಿದ್ದ.
ಜನರ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಮಾಡಿದರೆ, ಅವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶ ಅಲ್ಲಿನ ಕಾನೂನಿನಲ್ಲಿದೆ. ಆ ಪ್ರಕಾರ ಆತನನ್ನು ಬಂಧಿಸಿದ್ದಾರೆ.

ಕಾಮೆಂಟ್‌ಗಳ ವಿಭಾಗದಲ್ಲಿ ಜನರು ದುಬೈ ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...