ಜನನಿಬಿಡ ರಸ್ತೆಯಲ್ಲಿನ ಪಾದಚಾರಿಗಳು ದಾಟುವ ಸ್ಥಳದಲ್ಲಿ ಮಲಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಪ್ರಸಂಗ ನಡೆದಿದೆ.
ದುಬೈ ಪೊಲೀಸರು ಮಂಗಳವಾರ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಂಧನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಜೀವ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ.
ವ್ಯಕ್ತಿಯೊಬ್ಬ ರಸ್ತೆಮೇಲೆ ಮಲಗಿದ್ದು, ಈ ಮೂಲಕ ಆತ ತನ್ನ ಜೀವ ಮತ್ತು ಇತರರಿಗೆ ಅಪಾಯಕಾರಿ ಸನ್ನಿವೇಶ ತಂದೊಡ್ಡುತ್ತಿದ್ದ.
ಜನರ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಮಾಡಿದರೆ, ಅವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶ ಅಲ್ಲಿನ ಕಾನೂನಿನಲ್ಲಿದೆ. ಆ ಪ್ರಕಾರ ಆತನನ್ನು ಬಂಧಿಸಿದ್ದಾರೆ.
ಕಾಮೆಂಟ್ಗಳ ವಿಭಾಗದಲ್ಲಿ ಜನರು ದುಬೈ ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.