alex Certify ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ ಕಲಹ ಬಗೆಹರಿದುಬಿಡುತ್ತದೆ. ಉತ್ತರ ಪ್ರದೇಶದ ಗೊಂಡಾದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ.

ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಕಿತ್ತಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಪೇದೆ ಹಾಗೂ ಇನ್ಸ್‌ಪೆಕ್ಟರ್‌ ಇವರನ್ನು ಸಮಾಧಾನಪಡಿಸಲು ಹರಸಾಹಸಪಟ್ಟಿದ್ದಾರೆ. ಶಿವನಾಥ್‌ ಹಾಗೂ ಜಾನ್ಕಾ ದೇವಿ ಮಧ್ಯೆ ಎಪ್ರಿಲ್‌ 11ರಂದು ಜಗಳವಾಗಿತ್ತು. ನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದ್ದಾರೆ.

ಅಷ್ಟಾದ್ರೂ ಸಮಾಧಾನವಾಗದೇ ಇಬ್ಬರೂ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಗೊಂಡಾ ಪೊಲೀಸ್‌ ಠಾಣೆಯ ಎಸ್ಪಿ ಸಂತೋಷ್‌ ಮಿಶ್ರಾ, ಈ ಹಿರಿಜೀವಗಳಿಗೆ ಸಮಾಧಾನ ಹೇಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕಿತ್ತಾಟ ಮಾಡಿಕೊಳ್ಳದಂತೆ ತಿಳಿಹೇಳಿದ್ದಾರೆ. ಪೊಲೀಸ್‌ ಅಧಿಕಾರಿಯ ಮಾತಿಗೆ ಒಪ್ಪಿದ ವೃದ್ಧ ದಂಪತಿ ಠಾಣೆಯಲ್ಲೇ ಸಂಧಾನ ಮಾಡಿಕೊಂಡ್ರು.

ಪರಸ್ಪರ ಸಿಹಿ ತಿನ್ನಿಸುವ ಮೂಲಕ ಜಗಳಕ್ಕೆ ತಿಲಾಂಜಲಿ ಇಟ್ಟರು. ಈ ವಿಡಿಯೋ ಈಗ ವೈರಲ್‌ ಆಗಿದೆ. 75 ವರ್ಷದ ಶಿವನಾಥ್‌, ಸಿಹಿ ತಿನ್ನಿಸುತ್ತಿದ್ದ ಪತ್ನಿಗೆ ನನ್ನ ಕೈಯ್ಯನ್ನು ಕಚ್ಚಿಬಿಡಬೇಡ ಎಂದು ಜೋಕ್‌ ಮಾಡ್ತಿರೋದನ್ನು ನೋಡಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...