ಕೊರೋನ ಸಾಂಕ್ರಾಮಿಕ ಶುರುವಾದ್ಮೇಲೆ ಇತ್ತೀಚೆಗೆ ಲಯಕ್ಕೆ ಮರಳಿದ್ದ ಸಿನಿ ಇಂಡಸ್ಟ್ರಿಗೆ ಒಮಿಕ್ರಾನ್ ಶಾಪವಾಗಿ ಪರಿಣಮಿಸಿದೆ. ಬಾಲಿವುಡ್ ಹಾಗೂ ಪ್ಯಾನ್ ಇಂಡಿಯಾ ಚಿತ್ರಗಳು ರಿಲೀಸ್ ಗೆ ರೆಡಿಯಾಗಿರುವಾಗ ದೇಶದ ಹಲವು ಭಾಗಗಳಲ್ಲಿ ಹೇರಿರುವ ಟೈಟ್ ರೂಲ್ಸ್, ನೈಟ್ ಕರ್ಫ್ಯೂ ಹಾಗೂ 50% ನಿಯಮಗಳು ಸಿನಿಮಾ ಇಂಡಸ್ಟ್ರಿ ಪಾಲಿಗೆ ನಷ್ಟ ಉಂಟುಮಾಡುತ್ತಿವೆ. ಈಗಾಗ್ಲೇ ಬಾಲಿವುಡ್ ನ ಅತಿದೊಡ್ಡ ಮಾರ್ಕೆಟ್ ಅಂತಾನೇ ಕರೆಸಿಕೊಳ್ಳೋ ಮಹಾರಾಷ್ಟ್ರದಲ್ಲಿ ಎಲ್ಲೆಡೆ 50% ನಿಯಮ ಜಾರಿಯಾಗಿದೆ.
ಈ ನಿಯಮ ಸಿನಿಮಾ ಥಿಯೇಟರ್ ಗಳಿಗೂ ಅನ್ವಯವಾಗುತ್ತದೆ. ಇತ್ತ ಮಹಾರಾಷ್ಟ್ರದ ನಂತರ ದೆಹಲಿಯನ್ನ ಹಿಂದಿ ಸಿನಿಮಾಗಳ ಬಿಗ್ ಮಾರ್ಕೆಟ್ ಎಂದು ಕರೆಯಲಾಗುತ್ತದೆ. ಆದರೆ ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್ ತಡೆಗಟ್ಟಲು ಭಾಗಶಃ ಲಾಕ್ ಡೌನ್ ಏರಿಕೆಯಾಗಿದ್ದು ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಿಗೆ ಬೀಗ ಬಿದ್ದಿದೆ.
ಪಾರ್ಲೆ- ಜಿ ಪ್ಯಾಕೆಟ್ನಲ್ಲಿರುವ ‘ಜಿ’ ಎಂಬ ಪದದ ಅರ್ಥವೇನು..? ಪ್ಯಾಕೆಟ್ನಲ್ಲಿ ಕಾಣುವ ಮಗು ಯಾರು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಇದರಿಂದ ಸದ್ಯಕ್ಕೆ ರಿಲೀಸ್ ಆಗಿರುವ ಚಿತ್ರಗಳೇನೊ ನಷ್ಟ ಅನುಭವಿಸಿವೆ. ಆದರೆ ಮುಂದೆ ರಿಲೀಸ್ ಆಗ್ಬೇಕಿದ್ದ ಚಿತ್ರಗಳ, ಈಗಾಗ್ಲೇ ರಿಲೀಸ್ ಗೆ ರೆಡಿಯಾಗಿರುವ ಚಿತ್ರಗಳು ಸದ್ಯಕ್ಕಂತು ಥಿಯೇಟರ್ ರಿಲೀಸ್ ಮುಂದೂಡುತ್ತವೆ ಎಂಬುದು ಹಲವು ಸಿನಿ ವಿಮರ್ಶಕರ ಲೆಕ್ಕಾಚಾರ.
ಇದಕ್ಕೆ ಪೂರಕ ಎಂಬಂತೆ ಎರಡು ದಿನಗಳ ಹಿಂದೆ ಶಾಹಿದ್ ಕಪೂರ್ ನಟನೆಯ ಜರ್ಸಿ ಚಿತ್ರವನ್ನ ಮುಂದೂಡಿರುವ ಬಗ್ಗೆ ಸಿನಿಮಾ ತಂಡವೇ ಅಧಿಕೃತ ಮಾಹಿತಿ ನೀಡಿದೆ. ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಚೌಹಾಣ್, ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಅವ್ರ RRR, ಪ್ರಭಾಸ್ ರ ರಾಧೆಶ್ಯಾಮ್, ಜಾನ್ ಅಬ್ರಹಮ್ ಅಭಿನಯದ ಅಟ್ಯಾಕ್ ಚಿತ್ರಗಳ ರಿಲೀಸ್ ಮೇಲೂ ಲಾಕ್ ಡೌನ್ ಪರಿಣಾಮ ಬೀರೊದಂತು ಸತ್ಯ.
ಸಿನಿಮಾವನ್ನ ಬಿಜ಼ಿನೆಸ್ ನಂತೆ ನೋಡುತ್ತಿಲ್ಲಾ, ಸೂರ್ಯವಂಶಿ ಹಾಗೂ ಸ್ಪೈಡರ್ ಸಿನಿಮಾದಂತಹ ಬಿಗ್ ಸಿನಿಮಾಗಳನ್ನ ನೋಡಲು ಜನರು ಥಿಯೇಟರ್ ಗಳತ್ತ ಮರಳಿದ್ರು. 83 ಚಿತ್ರಕ್ಕೂ ಜನರಿಂದ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ, ಹೀಗಿರುವಾಗ ಯಾವುದೇ ಮುನ್ಸೂಚನೆ ನೀಡದೆ ಥಿಯೇಟರ್ ಗಳನ್ನ ಬಂದ್ ಮಾಡಿದ್ರೆ ಹೇಗೆ ಎಂದು ನಿರ್ಮಾಪಕ ಗಿರೀಶ್ ಜೋಹಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಬಂದ್ ಮಾಡುವ ಬದಲು 50% ಸೀಟಿಂಗ್, ಡಬಲ್ ಡೋಸ್, ಸಾಮಾಜಿಕ ಅಂತರ, ಮಾಸ್ಕ್ ನಂತಹ ಜೊತೆ ಟೈಟ್ ರೂಲ್ಸ್ ಜಾರಿ ಮಾಡಿ ಸಿನಿಮಾ ವ್ಯವಹಾರಕ್ಕೂ ಅವಕಾಶ ನೀಡಿ ಎಂದು ಭಾರತೀಯ ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದೆ.