alex Certify ಚೆನ್ನೈನಲ್ಲಿ ತಯಾರಾಯ್ತು 1,00,000 ನೇ ಮೇಡ್​ ಇನ್​ ಇಂಡಿಯಾ BMW ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈನಲ್ಲಿ ತಯಾರಾಯ್ತು 1,00,000 ನೇ ಮೇಡ್​ ಇನ್​ ಇಂಡಿಯಾ BMW ಕಾರು

ಬ್ಯುಸಿನೆಸ್​ ವೈರ್ ಇಂಡಿಯಾ ಭಾರತದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಬಿಎಂಡಬ್ಲು ಗ್ರೂಪ್​​ ಪ್ಲಾಂಟ್​​ ಚೆನ್ನೈ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ 1,00,000ನೇ ಕಾರನ್ನು ಹೊರತಂದಿದೆ. ಬಿಎಂಡಬ್ಲು ಇಂಡಿವಿಜ್ಯುವಲ್​ 740ಎಲ್​ಐ ಎಂ ಸ್ಫೋರ್ಟ್ಸ್​ ಆವೃತ್ತಿ ಈ ಹೊಸ ಕೀರ್ತಿಯನ್ನು ಪಡೆದುಕೊಂಡಿದೆ.

BMW ಗ್ರೂಪ್ ಪ್ಲಾಂಟ್ ಚೆನ್ನೈನ ಮ್ಯಾನೇಜಿಂಗ್ ಡೈರೆಕ್ಟರ್ ಥಾಮಸ್ ಡೋಸ್, 1,00,000 ನೇ, ಮೇಡ್-ಇನ್-ಇಂಡಿಯಾ ಕಾರು ನಮ್ಮ ಅಸೆಂಬ್ಲಿ ಲೈನ್‌ಗಳಿಂದ ಹೊರಬರುತ್ತಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ.ತಂಡದ ಕಠಿಣ ಪರಿಶ್ರಮ, ದಕ್ಷತೆ ಮತ್ತು ಸ್ಥಿರತೆ ಈ ಸಾಧನೆಯ ಫಲಿತಾಂಶವಾಗಿದೆ. ಚೆನ್ನೈನಲ್ಲಿ ತಯಾರಾಗಿರುವ ಕಾರು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನೇ ಹೊಂದಿದೆ ಎಂದು ಹೇಳಿದರು.

ನುರಿತ ಉದ್ಯೋಗಿಗಳು, ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ ಈ ಮಹತ್ವದ ಯಶಸ್ಸನ್ನು ಸಂಪಾದಿಸಿದ್ದಾರೆ ಎಂದು ಥಾಮಸ್​​ ಡೋಸ್​ ಇದೇ ವೇಳೆ ಹೇಳಿದ್ರು.

ಚೆನ್ನೈ ನ BMW ಗ್ರೂಪ್ ಪ್ಲಾಂಟ್ 2017ರ ಮಾರ್ಚ್​ 29ರಿಂದ ಈ ಕಾರ್ಯವನ್ನು ಆರಂಭಿಸಿತು. ಈ ವರ್ಷ ತನ್ನ 15ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...