ಬ್ಯುಸಿನೆಸ್ ವೈರ್ ಇಂಡಿಯಾ ಭಾರತದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಬಿಎಂಡಬ್ಲು ಗ್ರೂಪ್ ಪ್ಲಾಂಟ್ ಚೆನ್ನೈ ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾದ 1,00,000ನೇ ಕಾರನ್ನು ಹೊರತಂದಿದೆ. ಬಿಎಂಡಬ್ಲು ಇಂಡಿವಿಜ್ಯುವಲ್ 740ಎಲ್ಐ ಎಂ ಸ್ಫೋರ್ಟ್ಸ್ ಆವೃತ್ತಿ ಈ ಹೊಸ ಕೀರ್ತಿಯನ್ನು ಪಡೆದುಕೊಂಡಿದೆ.
BMW ಗ್ರೂಪ್ ಪ್ಲಾಂಟ್ ಚೆನ್ನೈನ ಮ್ಯಾನೇಜಿಂಗ್ ಡೈರೆಕ್ಟರ್ ಥಾಮಸ್ ಡೋಸ್, 1,00,000 ನೇ, ಮೇಡ್-ಇನ್-ಇಂಡಿಯಾ ಕಾರು ನಮ್ಮ ಅಸೆಂಬ್ಲಿ ಲೈನ್ಗಳಿಂದ ಹೊರಬರುತ್ತಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ.ತಂಡದ ಕಠಿಣ ಪರಿಶ್ರಮ, ದಕ್ಷತೆ ಮತ್ತು ಸ್ಥಿರತೆ ಈ ಸಾಧನೆಯ ಫಲಿತಾಂಶವಾಗಿದೆ. ಚೆನ್ನೈನಲ್ಲಿ ತಯಾರಾಗಿರುವ ಕಾರು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನೇ ಹೊಂದಿದೆ ಎಂದು ಹೇಳಿದರು.
ನುರಿತ ಉದ್ಯೋಗಿಗಳು, ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ ಈ ಮಹತ್ವದ ಯಶಸ್ಸನ್ನು ಸಂಪಾದಿಸಿದ್ದಾರೆ ಎಂದು ಥಾಮಸ್ ಡೋಸ್ ಇದೇ ವೇಳೆ ಹೇಳಿದ್ರು.
ಚೆನ್ನೈ ನ BMW ಗ್ರೂಪ್ ಪ್ಲಾಂಟ್ 2017ರ ಮಾರ್ಚ್ 29ರಿಂದ ಈ ಕಾರ್ಯವನ್ನು ಆರಂಭಿಸಿತು. ಈ ವರ್ಷ ತನ್ನ 15ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.