alex Certify ಚುನಾವಣಾ ಆಯೋಗದ ವೆಬ್ಸೈಟ್ ಹ್ಯಾಕ್: ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ಆಯೋಗದ ವೆಬ್ಸೈಟ್ ಹ್ಯಾಕ್: ಆರೋಪಿ ಅರೆಸ್ಟ್

ಸಹರಾನ್ ಪುರ: ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ಹ್ಯಾಕ್ ಮಾಡಿದ ಆರೋಪದ ಮೇಲೆ ನಾಕುಡ್ ನಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರ. ಈತ ತನ್ನ ಕಂಪ್ಯೂಟರ್ ಅಂಗಡಿಯಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿಗಳನ್ನು ತಯಾರಿಸಿದ್ದಾನೆ ಎಂದು ತಿಳಿದು ಬಂದಿದೆ.

ಬಂಧಿತ ವ್ಯಕ್ತಿಯನ್ನು ವಿಪುಲ್ ಸೈನಿ ಎಂದು ಗುರುತಿಸಲಾಗಿದೆ. ಇಸಿಐ ಅಧಿಕಾರಿಗಳು ಬಳಸುತ್ತಿರುವ ಅದೇ ಪಾಸ್‌ವರ್ಡ್ ಬಳಸಿ ಇಸಿಐ ವೆಬ್‌ಸೈಟ್‌ಗೆ ಲಾಗ್ ಇನ್ ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮ ವೆಬ್ಸೈಟ್ ನಲ್ಲಿ ಆಗಿರುವ ವ್ಯತ್ಯಾಸವನ್ನು ಗಮನಿಸಿದ ಇಸಿಐ, ಈ ವಿಷಯವನ್ನು ಬಹು ತನಿಖಾ ಏಜೆನ್ಸಿಗಳಿಗೆ ವರದಿ ಮಾಡಿತು. ಸೈಬರ್ ಕ್ರೈಮ್ ತಂಡ ಹಾಗೂ ಸಹಾರನ್‌ಪುರ ಅಪರಾಧ ವಿಭಾಗದ ಜಂಟಿ ತಂಡವು ಸೈನಿಯನ್ನು ಮಾಚರ್‌ಹೆಡಿ ಗ್ರಾಮದಲ್ಲಿ ಬಂಧಿಸಿತು.

ವಿವಾಹ ನಂತರದ ಬಲವಂತದ ಲೈಂಗಿಕತೆಯು ಕಾನೂನುಬಾಹಿರವಲ್ಲ: ಮುಂಬೈ ನ್ಯಾಯಾಲಯದ ತೀರ್ಪು

ಬಂಧಿತ ವ್ಯಕ್ತಿ ಸೈನಿಯು ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ (ಬಿಸಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈತನ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ಹಾರ್ಡ್ ಡ್ರೈವ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸೈನಿಯ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ. ಇರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ‘’ಈ ಐಡಿಗಳನ್ನು ಏಕೆ ತಯಾರಿಸುತ್ತಿದ್ದಾರೆ ಅಥವಾ ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ ಎಂದು ನಾವು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ’’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...