ಚಿರತೆ ದಾಳಿಗೆ ಜಾನುವಾರು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಸುಣ್ಣದಮನೆ ಗ್ರಾಮದ ಲಲಿತಮ್ಮ ಎಂಬವರ ಜಾನುವಾರು ಮೇಯಲು ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಅರೆಬರೆ ತಿಂದ ಸ್ಥಿತಿಯಲ್ಲಿ ಜಾನುವಾರು ಪತ್ತೆಯಾಗಿದೆ.
ಚಿರತೆ ದಾಳಿ ಕಾರಣಕ್ಕೆ ಜಾನುವಾರು ಬಲಿಯಾಗಿದೆ ಎಂದು ಹೇಳಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಿಂದ ಕಾಲ ಕಳೆಯುವಂತಾಗಿದೆ. ಸ್ಥಳಕ್ಕೆ ಮೇಗರವಳ್ಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.