alex Certify ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ? ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ? ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ ಕೆಲವು ಸೌಮ್ಯ ಬದಲಾವಣೆಗಳನ್ನು ತಂದರೆ ಆತ ದೀರ್ಘಾಯುಷಿಯಾಗಿರುತ್ತಾನೆ. ನಿಮಗೂ ಕೂಡ ಸದಾ ಯಂಗ್‌ ಆಗಿಯೇ ಇರಬೇಕು ಎಂಬ ಆಸೆಯಿದ್ದರೆ ಈ ಸಲಹೆಗಳನ್ನು ಪಾಲಿಸಿ. ಕೆಲವೊಂದು ಅಭ್ಯಾಸಗಳನ್ನು ಶಾಶ್ವತವಾಗಿ ಬಿಟ್ಟುಬಿಡಿ.

1. ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಕೊಬ್ಬುಗಳು ಬಹಳ ಮುಖ್ಯ. ಎಲ್ಲಾ ರೀತಿಯ ಕೊಬ್ಬುಗಳು ದೇಹಕ್ಕೆ ಹಾನಿಕಾರಕವೆಂದು ಅನೇಕ ಜನರು ಭಾವಿಸುತ್ತಾರೆ. ಆದ್ದರಿಂದ ಆರೋಗ್ಯಕರ ಕೊಬ್ಬನ್ನು ಸಹ ಸೇವಿಸುವುದಿಲ್ಲ. ಈ ಕಾರಣದಿಂದಾಗಿ ಚರ್ಮ ಮತ್ತು ಕೂದಲಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ. ಚರ್ಮಕ್ಕೆ ಮತ್ತಷ್ಟು ವೇಗವಾಗಿ ವಯಸ್ಸಾಗಲು ಪ್ರಾರಂಭಿಸುತ್ತವೆ.

2. ಕೆಲವರು ಎಷ್ಟು ಸೋಮಾರಿಗಳಾಗಿರುತ್ತಾರೆ ಎಂದರೆ ಇಡೀ ದಿನ ಕುಳಿತೇ ಕಾಲ ಕಳೆಯುತ್ತಾರೆ. ಈ ಕಾರಣದಿಂದಾಗಿ ದೇಹದ ಚಯಾಪಚಯವು ದುರ್ಬಲಗೊಳ್ಳುತ್ತದೆ ಮತ್ತು ದೇಹದಲ್ಲಿ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಸೋಮಾರಿತನವು ಬೊಜ್ಜು, ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಬಲಿಯಾಗುವಂತೆ ಮಾಡುತ್ತದೆ.

3. ಬೆಳಗಿನ ಉಪಾಹಾರದಲ್ಲಿ ಅನೇಕರು ಬಹಳಷ್ಟು ಹಣ್ಣುಗಳನ್ನು ಸೇವಿಸುತ್ತಾರೆ. ಹಣ್ಣುಗಳ ಅತಿಯಾದ ಸೇವನೆಯು ದೇಹದಲ್ಲಿ ಫ್ರಕ್ಟೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ.

4. ಅನೇಕರು ತಡರಾತ್ರಿಯಲ್ಲಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ತಡರಾತ್ರಿ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕಾರಣದಿಂದಾಗಿ ದೇಹದ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ನೀವು ಸ್ಥೂಲಕಾಯತೆಗೆ ಬಲಿಯಾಗುತ್ತೀರಿ.

5. ಸನ್‌ಸ್ಕ್ರೀನ್ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಸನ್‌ಸ್ಕ್ರೀನ್ ಸೂರ್ಯನ UV ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಚರ್ಮದ ಮೇಲೆ ಸುಕ್ಕುಗಳು ಮತ್ತು ನಸುಕಂದು ಮಚ್ಚೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಸನ್‌ ಸ್ಕ್ರೀನ್‌ ಬಳಕೆ ಮಾಡಿ, ಚರ್ಮವನ್ನು ಯಂಗ್‌ ಆಗಿ ಇರಿಸಿಕೊಳ್ಳಿ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...