alex Certify ಚಿಂತೆ ಇಲ್ಲದೇ ಭರ್ಜರಿಯಾಗಿ ಕುಣಿದ ಮಹಿಳೆ, ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಂತೆ ಇಲ್ಲದೇ ಭರ್ಜರಿಯಾಗಿ ಕುಣಿದ ಮಹಿಳೆ, ವಿಡಿಯೋ ವೈರಲ್

ಮಹಿಳೆಯೊಬ್ಬರು ದೇಸಿ ಸಿನಿಮಾ ಹಾಡುಗಳನ್ನು ಅನುಕರಿಸಿ, ಗುನುಗುತ್ತಾ ನೃತ್ಯ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎದ್ದಂತೆ ವೈರಲ್​ ಆಗಿದೆ.

ಆಕೆಯು ಹಿಂದಿ ಮತ್ತು ಪಂಜಾಬಿ ಹಾಡುಗಳಿಗೆ ನಿರಾತಂಕವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ. ಯಾರೂ ತಮ್ಮನ್ನು ನೋಡುತ್ತಾರೋ, ಏನೆಂದುಕೊಳ್ಳುತ್ತಾರೋ ಎಂಬ ಗೋಜಿಗೆ ಹೋಗದೇ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಟ್ವಿಟರ್​ ಹ್ಯಾಂಡಲ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೋ 1 ಲಕ್ಷ ವೀಕ್ಷಣೆ ಗಳಿಸಿದೆ. ಅನೇಕರು ಕಾಮೆಂಟ್​ ಮಾಡಿದ್ದು,ʼತನ್ನ ಸ್ವಂತ ನಿಯಮ ಮತ್ತು ಷರತ್ತುಗಳ ಮೇಲೆ ತನ್ನ ಜೀವನ ನಡೆಸುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ’ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ರೀತಿ ಇನ್ನೊಬ್ಬರು ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿಗೆ ಎನಜಿರ್ಟಿಕ್​ ಆಗಿ ಡ್ಯಾನ್ಸ್​ ಮಾಡಿರುವುದು ವೈರಲ್​ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿಯಿಂದ ಕಾಮೆಂಟ್​ ಮಾಡಿದ್ದಾರೆ. ಕೆಲವರು ದಾದಿ ಮತ್ತು ಬಾಲಿವುಡ್​ ತಾರೆ ನೋರಾ ಫತೇಹಿ ನಡುವೆ ಹೋಲಿಕೆ ಮಾಡಿದ್ದಾರೆ.

— Nazish mirza (@nazish_zeb) July 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...