alex Certify ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಇರಲಿ ಎಚ್ಚರ; ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಇರಲಿ ಎಚ್ಚರ; ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ…!

ಸ್ಮಾರ್ಟ್‌ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದೆ. ಹಾಗಂತ ಇದು ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸ್ಫೋಟದಿಂದ ಅನಾಹುತಗಳು ಸಂಭವಿಸುತ್ತಿವೆ. ಕಾಲಾನಂತರದಲ್ಲಿ ಫೋನ್‌ಗಳ ಬ್ಯಾಟರಿ ಕೆಟ್ಟು ಹೋಗುತ್ತದೆ. ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಫೋನ್‌ನ ಬ್ಯಾಟರಿ ಕೆಡದಂತೆ ಸ್ಮಾರ್ಟ್ ಆಗಿ ಚಾರ್ಜ್ ಮಾಡುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಫೋನಿನ ಬ್ಯಾಟರಿ ಬೇಗ ಹಾಳಾಗುವುದಿಲ್ಲ ಮತ್ತು ಬ್ಲಾಸ್ಟ್‌ನಂತಹ ಸಮಸ್ಯೆ ಬರುವುದಿಲ್ಲ.

ಫೋನ್‌ನೊಂದಿಗೆ ಬಂದ ಚಾರ್ಜರ್‌ ಅನ್ನು ಮಾತ್ರ ಬಳಸಿ. ಬೇರೆ ಚಾರ್ಜರ್‌ ಮೂಲಕ ಫೋನ್ ಅನ್ನು ಚಾರ್ಜ್ ಮಾಡಬೇಡಿ. ಯುನಿವರ್ಸಲ್ ಚಾರ್ಜಿಂಗ್ ಇಂಟರ್ಫೇಸ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸಲಾಗುತ್ತದೆ. ಕಡಿಮೆ ವ್ಯಾಟ್ ಚಾರ್ಜರ್‌ನಿಂದ ಚಾರ್ಜ್ ಮಾಡಿದರೆ ಬ್ಯಾಟರಿಗೆ ಹಾನಿಯಾಗುವ ಅಪಾಯವಿದೆ. ಹಾಗಾಗಿ ಸ್ಮಾರ್ಟ್ಫೋನ್ ಅನ್ನು ಮೂಲ ಚಾರ್ಜರ್‌ನೊಂದಿಗೆ ಮಾತ್ರ ಚಾರ್ಜ್ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಯಾವುದೇ ಲಾಕರ್ ಚಾರ್ಜರ್‌ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬೇಡಿ. ಹೀಗೆ ಮಾಡಿದರೆ ಹಾನಿ ಖಂಡಿತ. ಯಾವಾಗಲೂ ಫೋನ್ ಅನ್ನು ಅದರದ್ದೇ ಚಾರ್ಜರ್ ಮತ್ತು ಕೇಬಲ್ ಸಹಾಯದಿಂದ ಚಾರ್ಜ್ ಮಾಡಿ.

ನೀವು ಸ್ಮಾರ್ಟ್ಫೋನ್ ಅನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಕವರ್ ತೆಗೆದುಬಿಡಿ. ಚಾರ್ಜಿಂಗ್‌ ಸಮಯದಲ್ಲಿ ಶಾಖ ಬಿಡುಗಡೆಯಾಗುತ್ತದೆ. ಕವರ್ ಹಾಕಿದ್ದರೆ ಶಾಖವು ಹೊರಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಸ್ಫೋಟದ ಅಪಾಯವು ಹೆಚ್ಚಾಗುತ್ತದೆ. ಫಾಸ್ಟ್‌ ಚಾರ್ಜರ್ ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು. ಪ್ರತಿ ಫೋನ್‌ನ ಬ್ಯಾಟರಿ ವಿಭಿನ್ನವಾಗಿರುತ್ತದೆ. ಕೆಲವು ಫೋನ್‌ಗಳು 33W ಚಾರ್ಜರ್ ಮತ್ತು ಕೆಲವು 65W ಚಾರ್ಜರ್ ಅನ್ನು ಬೆಂಬಲಿಸುತ್ತವೆ. 120W ವೇಗದ ಚಾರ್ಜರ್‌ ಮೂಲಕ ಚಾರ್ಜ್ ಮಾಡಿದರೆ  ನಂತರ ಈ ಪ್ರಕ್ರಿಯೆ ನಿಧಾನವಾಗುತ್ತದೆ ಮತ್ತು ಬ್ಯಾಟರಿ ಕೂಡ ಲೋಡ್ ಆಗುತ್ತದೆ.

ರಾತ್ರಿಯಿಡೀ ಫೋನ್ ಅನ್ನು ಚಾರ್ಜಿಂಗ್‌ಗೆ ಹಾಕಿ ಇಡಬಾರದು. ಸಾಮಾನ್ಯ ಫೋನ್‌ಗಳು 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ, 45 ನಿಮಿಷಗಳಲ್ಲಿ ಫಾಸ್ಟ್‌ ಚಾರ್ಜಿಂಗ್‌ ಮಾಡಬಹುದು. ರಾತ್ರಿಯಿಡೀ ಚಾರ್ಜಿಂಗ್‌ಗೆ ಹಾಕಿ ಇಡುವುದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ. ಫೋನ್‌ ಸ್ಫೋಟಗೊಳ್ಳುವ ಅಪಾಯವಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...