ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ ಕೆಲವು ಕಲಾವಿದರ ಕೃತಿಗಳು ವೈರಲ್ ಆಗುತ್ತವೆ. ಅಂಥದ್ದೇ ಒಂದು ಕುತೂಹಲದ ಕೃತಿಯೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಕ್ಪೀಸ್ ಬಳಸಿ ಉತ್ತಮ ಕಲಾಕೃತಿ ರಚಿಸಿರುವುದು ಇದಾಗಿದೆ. ಯುವತಿಯೊಬ್ಬರು ಚಾಕ್ಪೀಸ್ನಿಂದ ಕಲಾಕೃತಿ ರಚಿಸಿದ್ದು, ಇದನ್ನು ನೋಡಿದರೆ ನಂಬಲು ಅಸಾಧ್ಯ ಎನಿಸುತ್ತದೆ. ಚಾಕ್ಪೀಸ್ನ ಸೈಡ್ ಬಳಸಿ ಬೋರ್ಡ್ ಮೇಲೆ ಮಹಿಳೆ ಹಾಗೂ ಪುರುಷನ ಕಲಾಕೃತಿಯನ್ನು ರಚಿಸಲಾಗಿದೆ. ಮಳೆಗಾಲದ ಚಿತ್ರಣ ನೀಡುವ ಕೊಡೆ ಹಿಡಿದ ಮಹಿಳೆ ಮತ್ತು ಪುರುಷನ ಚಿತ್ರ ಮೂಡಿಬಂದಿದೆ.
ರೇಖೆಗಳ ಮೂಲಕ ಈ ಕಲಾಕೃತಿ ರಚಿಸಿದ್ದು, ಅದು ಸಂಪೂರ್ಣಗೊಂಡ ನಂತರ ಚಾಕ್ಪೀಸ್ನಿಂದ ಮಾಡಿದ್ದು ಎಂದು ಹೇಳಲು ಸಾಧ್ಯವೇ ಇಲ್ಲದಷ್ಟು ಅಂದವಾಗಿ ಮೂಡಿಬಂದಿದೆ. ನವೆಂಬರ್ 4 ರಂದು ಪೋಸ್ಟ್ ಮಾಡಲಾದ ವೈರಲ್ ವಿಡಿಯೋ ಟ್ವಿಟರ್‌ನಲ್ಲಿ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 42,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.