ಚಳಿಗಾಲ ಬಂತೆಂದರೆ ಸಾಕು ಕೈಕಾಲುಗಳ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ನಡೆಯಲೂ ಆಗದಷ್ಟು ತೀವ್ರವಾಗಿ ಕಾಡುತ್ತದೆ. ಅದಕ್ಕೂ ಅಡುಗೆ ಮನೆಯಲ್ಲಿ ಪರಿಹಾರವಿದೆ.
ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಇದು ತ್ವಚೆಯನ್ನು ಮೃದುಗೊಳಿಸುವುದು ಮಾತ್ರವಲ್ಲ ನಿಮ್ಮ ಕಾಲುಗಂಟುಗಳ ನೋವನ್ನೂ ಕಡಿಮೆ ಮಾಡುತ್ತದೆ. ನಿತ್ಯ ಸ್ನಾನದ ಬಳಿಕ ಎಣ್ಣೆ ಹಚ್ಚಿ ಹತ್ತು ನಿಮಿಷ ತಿಕ್ಕಿದರೆ ಸಾಕು, ಬಹುಪಾಲು ನೋವು ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯನ್ನೂ ಇದೇ ರೀತಿ ಬಳಸಬಹುದು.
ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಚಮಚ ದಾಲ್ಚಿನಿ ಪುಡಿ ಬೆರೆಸಿ ಒಂದು ಲೋಟ ನೀರು ಕುಡಿದರೆ ವಾರದೊಳಗೆ ನಿಮ್ಮ ಗಂಟುಗಳ ನೋವು ಕಡಿಮೆಯಾಗುತ್ತದೆ.
ಚಳಿಗಾಲದಲ್ಲಿ ಪೊಟ್ಯಾಶಿಯಂ ಕೊರತೆ ವಿಪರೀತ ಕಾಡುತ್ತದೆ. ಇದರ ನಿವಾರಣೆಗೆ ನಿತ್ಯ ಬಾಳೆಹಣ್ಣು ತಿನ್ನಿ. ಮಧ್ಯಾಹ್ನದ ಹೊತ್ತಿಗೆ ಇದನ್ನು ಸೇವಿಸುವುದು ಒಳ್ಳೆಯದು. ಬೆಳಿಗ್ಗೆ ಅಥವಾ ಸಂಜೆ ಸೇವಿಸಿದರೆ ಕಫ ಕಟ್ಟಿ ಕೆಮ್ಮು ಜ್ವರದ ಲಕ್ಷಣಗಳು ಕಂಡುಬಂದಾವು.
ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಅರಶಿನ ಉದುರಿಸಿ ಕುಡಿಯಿರಿ. ಕೀಲು ನೋವು ಕಡಿಮೆಯಾಗುತ್ತದೆ.