alex Certify ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಕೋವಿಡ್ ಪ್ರೋಟೋಕಾಲ್ ಕಟ್ಟುನಿಟ್ಟಿನ ಪಾಲನೆ: ಸೇವೆಗೆ ರೋಬೋಟ್‌ ನಿಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಕೋವಿಡ್ ಪ್ರೋಟೋಕಾಲ್ ಕಟ್ಟುನಿಟ್ಟಿನ ಪಾಲನೆ: ಸೇವೆಗೆ ರೋಬೋಟ್‌ ನಿಯೋಜನೆ

ಬೀಜಿಂಗ್: ಚೀನಾ ದೇಶವು ತನ್ನ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಎಂಬುದು ನಿಮಗೆ ತಿಳಿದಿರಬಹುದು. ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿ ಮತ್ತಷ್ಟು ಹೆಚ್ಚಿರುವುದರಿಂದ ಚೀನಾ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮಾನವ ಸಂವಹನವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ನಿಟ್ಟಿನಲ್ಲಿ ರೋಬೋಟ್‌ಗಳನ್ನು ನಿಯೋಜಿಸಿದೆ.

ಹೌದು, ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದ್ದು, ವಿಶ್ವದಾದ್ಯಂತ 2,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಈವೆಂಟ್‌ನಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಹೀಗಾಗಿ ಕೋವಿಡ್ ಅಪಾಯವನ್ನು ಕಡಿಮೆ ಮಾಡಲು, ಕ್ರೀಡಾಪಟುಗಳು ತಂಗಿರುವ ಬೀಜಿಂಗ್ ಹೋಟೆಲ್‌ನಲ್ಲಿ ಕೊಠಡಿ ಸೇವೆಗಾಗಿ ರೋಬೋಟ್ ಗಳನ್ನು ಬಳಸಲಾಗುತ್ತಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ರೋಬೋಟ್ ಅತಿಥಿಗಳಿಗೆ ಆಹಾರವನ್ನು ಹೇಗೆ ತಲುಪಿಸುತ್ತದೆ ಎಂಬುದನ್ನು ವಿಡಿಯೋ ತೋರಿಸುತ್ತದೆ. ರೋಬೋಟ್ ಅತಿಥಿ ತಂಗಿರುವ ಕೊಠಡಿಯ ಬಾಗಿಲಿನ ಮುಂದೆ ಬರುತ್ತದೆ. ಈ ವೇಳೆ ಅತಿಥಿ ಪಿನ್‌ಕೋಡ್ ಅನ್ನು ಟೈಪ್ ಮಾಡುತ್ತಾರೆ. ನಂತರ ರೋಬೋಟ್ ಪ್ಯಾಕ್ ಮಾಡಿದ ಆಹಾರವನ್ನು ತೆಗೆದುಕೊಳ್ಳಲು ಅನುಮತಿಸುತ್ತದೆ. ಅತಿಥಿಯು ಆಹಾರವನ್ನು ತೆಗೆದುಕೊಂಡ ನಂತರ ರೋಬೋಟ್ ಅಲ್ಲಿಂದ ತೆರಳುತ್ತದೆ.

BIG NEWS: ರಾತ್ರಿಯಲ್ಲಿ ಹೇಗಿರುತ್ತೆ ಭಾರತ ಎಂಬುದನ್ನು ಹೋಲಿಸಿದ 2012, 2021 ರ ಉಪಗ್ರಹ ಚಿತ್ರಗಳಿವು

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವು ಸೀಲಿಂಗ್‌ನಿಂದ ಸ್ವಯಂಚಾಲಿತ ಯಂತ್ರದಿಂದ ಆಹಾರದ ಪೊಟ್ಟಣವನ್ನು ನೀಡುವುದನ್ನು ತೋರಿಸುತ್ತದೆ. ಟೋಕಿಯೊ ಒಲಿಂಪಿಕ್ಸ್ ಗೆ ಹೋಲಿಸಿದರೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭೇಟಿ ನೀಡುವ ಮಾಧ್ಯಮಗಳು, ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗುವುದು ಎಂದು ವರದಿ ತಿಳಿಸಿದೆ.

2014 ರಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರೋಬೋಟ್ ಕ್ರಾಂತಿಯ ಕರೆ ನೀಡಿದ್ದರು. ಅಂದಿನಿಂದ ಚೀನಾವು ಯಾಂತ್ರೀಕರಣದತ್ತ ಹೊರಟಿದ್ದು. ಮಾನವರ ಬದಲು ರೋಬೋಟ್‌ಗಳನ್ನು ಅಳವಡಿಸಲಾಗುತ್ತಿದೆ.

— Reuters (@Reuters) January 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...