alex Certify ʼಚಳಿಗಾಲʼದಲ್ಲಿ ಹೆಚ್ಚಾಗುತ್ತಾ ಮಾನಸಿಕ ʼಖಿನ್ನತೆʼ ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಳಿಗಾಲʼದಲ್ಲಿ ಹೆಚ್ಚಾಗುತ್ತಾ ಮಾನಸಿಕ ʼಖಿನ್ನತೆʼ ? ಇಲ್ಲಿದೆ ಮಾಹಿತಿ

ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (SAD) ಅನ್ನು ಮೂಡ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ.‌ ಇದನ್ನ ಪ್ರತಿ ವರ್ಷ ನಿರ್ದಿಷ್ಟ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಹೆಚ್ಚಾಗುವ ಖಿನ್ನತೆ ಎನ್ನಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಚಳಿಗಾಲದ ಬ್ಲೂಸ್’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲು ಈ ಮೂಡ್ ಬದಲಾವಣೆಗಳಾಗುವ ಸಾಧ್ಯತೆಯಿದೆ. ಆದರೆ ಬೇಸಿಗೆಯಲ್ಲಿ ಇದು ಅಪರೂಪ. ಋತುಗಳಲ್ಲಾಗುವ ಬದಲಾವಣೆಯಿಂದ ಖಿನ್ನತೆಗೆ ಪ್ರಚೋದನೆ ಸಿಕ್ಕಂತಾಗುತ್ತದೆ. ಸ್ಯಾಡ್ ಅಸ್ವಸ್ಥತೆಗೆ ಒಳಗಾಗುವ ವ್ಯಕ್ತಿ ಸಂಪೂರ್ಣ ಖಿನ್ನತೆಗೆ ಹೋಗದಿದ್ದರು, ಆ ರೀತಿಯ ರೋಗಲಕ್ಷಗಳ ದುಃಖವನ್ನು ಅನುಭವಿಸುತ್ತಾನೆ.

SAD ಅಥವಾ ಋತುಮಾನದ ಪ್ರಭಾವದ ಅಸ್ವಸ್ಥತೆ ಹೊಂದಿರುವ ಜನರು ಆತಂಕ, ಕಿರಿಕಿರಿ, ಚಡಪಡಿಕೆ, ತೀವ್ರ ಆಯಾಸ, ಹತಾಶೆ, ನಿಷ್ಪ್ರಯೋಜಕ ಎಂಬ ಭಾವನೆ, ಏಕಾಗ್ರತೆ, ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ನಷ್ಟ, ಸಾಮಾಜಿಕ ಕಾರ್ಯಕ್ರಮಗಳಿಂದ ಅಂತರ, ಅನಿಯಮಿತ ನಿದ್ರೆ, ಹೆಚ್ಚು ಅಥವಾ ಕಡಿಮೆ ಹಸಿವಿನಂತಹ ರೋಗ ಲಕ್ಷಣಗಳಿಂದ ಬಳಲುತ್ತಾರೆ.

ಸ್ಯಾಡ್ ಅಸ್ವಸ್ಥತೆಗೆ ಸುಲಭ “ಸ್ವ”ಚಿಕಿತ್ಸೆ !

ಬೆಳಕಿನಲ್ಲಿ ಹೆಚ್ಚು ಸಮಯ ಕಳೆಯುವುದು

ಈ ಸ್ಯಾಡ್ ಅನುಭವಿಸಲು ಪ್ರಾಥಮಿಕ ಕಾರಣವೆಂದರೆ ಚಳಿ. ಇದನ್ನ ತಪ್ಪಿಸಲು ಆದಷ್ಟು ನೈಸರ್ಗಿಕ ಬೆಳಕಿನಲ್ಲಿ ಕಾಲ ಕಳೆಯಿರಿ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗನೆ ಎದ್ದು ಬಿಸಿಲಿನಲ್ಲಿ ಹೊರಹೋಗಿ. ಆದಷ್ಟು ಬೆಳಕಿನಲ್ಲಿ ಆ್ಯಕ್ಟೀವ್ ಆಗಿರುವುದು ಸಹಾಯಕವಾಗುತ್ತದೆ.

ಉತ್ತಮ ಆಹಾರ ಸೇವಿಸಿ, ಜಂಕ್ ಫುಡ್ನಿಂದ ದೂರವಿರಿ

ಸಂಶೋಧನೆಯ ಪ್ರಕಾರ, ಈ ಅಸ್ವಸ್ಥತೆಗೆ ಒಳಗಾಗುವ ವ್ಯಕ್ತಿಗಳು ನಾಲಿಗೆಗೆ ರುಚಿ ನೀಡುವಂತ ಕಾರ್ಬೋಹೈಡ್ರೇಟ್-ಭರಿತ ಜಂಕ್ ಆಹಾರಗಳನ್ನು, ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ದೇಹವನ್ನು ಚೈತನ್ಯವಾಗಿಡಲು ಆರೋಗ್ಯಕರ ಆಹಾರ ತಿನ್ನುವುದು ಉಪಯುಕ್ತ. ಅಷ್ಟೇ ಅಲ್ಲಾ ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಆದಷ್ಟು ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಸಹಾಯಕ.

ಸಕ್ರಿಯವಾಗಿರಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಿ

ದಣಿವು ಮತ್ತು ಆಲಸ್ಯ SADನ ರೋಗ ಸಾಮಾನ್ಯ ಲಕ್ಷಣ. ಶಕ್ತಿಯನ್ನು ಹೆಚ್ಚಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ದೈಹಿಕವಾಗಿ ಸಕ್ರಿಯವಾಗಿರಿ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರತಿದಿನ ವ್ಯಾಯಾಮ ಮಾಡಲು ಪ್ರಯತ್ನಿಸಿ. ಎಷ್ಟು ಸಕ್ರಿಯವಾಗಿರುತ್ತೇವೊ, ಮನಸ್ಸು ಮತ್ತು ದೇಹ ಅಷ್ಟೇ ಉಲ್ಲಾಸಭರಿತವಾಗಿರತ್ತದೆ ಎಂದು ತಜ್ಞರು ಹೇಳುತ್ತಾರೆ‌.

ಏಕಾಂತದಿಂದ ದೂರವಿರಿ

ಕತ್ತಲು ತುಂಬಿರುವ ಈ‌ ಶೀತದ ದಿನಗಳಲ್ಲಿ, ಬೆಚ್ಚಗೆ ಒಂದುಕಡೆ ಇರಬೇಕೆಂದು ಅನ್ನಿಸುವುದು ಸಹಜ. ಆದರೆ ಈ ರೋಗ ಏಕಾಂತದಲ್ಲಿದ್ದಾಗ ಹೆಚ್ಚು ಕಾಡುತ್ತದೆ. ಕೆಲವರಂತು ಹೊರಗೆ ಹೋಗುವುದನ್ನ ತಪ್ಪಿಸಲು ಪ್ರಯತ್ನಿಸುತ್ತಾರೆ, ಆದರೆ ಈ ಏಕಾಂಗಿ ಪ್ರವೃತ್ತಿ ರೋಗವನ್ನು ಉಲ್ಭಣಗೊಳಿಸಬಹುದು.‌ ಹಾಗಾಗಿ ಹೆಚ್ಚು ಜನರೊಂದಿಗೆ ಬೆರೆಯುವುದು ಉತ್ತಮ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...