alex Certify ಚಳಿಗಾಲದಲ್ಲಿ ಈ ತರಕಾಯಿಯನ್ನು ಸೇವಿಸಿದ್ರೆ ಹತ್ತಾರು ರೋಗಗಳಿಂದ ದೂರವಿರಬಹುದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಈ ತರಕಾಯಿಯನ್ನು ಸೇವಿಸಿದ್ರೆ ಹತ್ತಾರು ರೋಗಗಳಿಂದ ದೂರವಿರಬಹುದು….!

ಹಾಗಲಕಾಯಿಯನ್ನು ಇಷ್ಟಪಡುವವರು ಬಹಳ ಅಪರೂಪ. ಕೆಲವರಂತೂ ಹಾಗಲಕಾಯಿ ಹೆಸರು ಕೇಳಿದ್ರೆ ಸಾಕು ದೂರ ಓಡ್ತಾರೆ. ಆದ್ರೆ ಕೊಂಚ ಕಹಿಯಾದ್ರೂ ಇದರಲ್ಲಿ ಆರೋಗ್ಯದ ಗಣಿಯೇ ಇದೆ. ಹಾಗಲಕಾಯಿ ಸೇವನೆಯಿಂದ ದೇಹಕ್ಕೆ ಅನೇಕ ಲಾಭಗಳು ಸಿಗುತ್ತವೆ. ಹಾಗಲಕಾಯಿಯಲ್ಲಿ ತಾಮ್ರ, ವಿಟಮಿನ್ ಬಿ, ಅಪರ್ಯಾಪ್ತ ಕೊಬ್ಬಿನಾಮ್ಲಗಳು ಸೇರಿದಂತೆ ಅನೇಕ ಪೋಷಕಾಂಶಗಳು ಇರುತ್ತವೆ. ಇದರಲ್ಲಿರುವ ಎಂಟಿವೈರಲ್ ಮತ್ತು ಆ್ಯಂಟಿ ಬಯೋಟಿಕ್ ಗುಣಗಳಿಂದಾಗಿ ದೇಹವನ್ನು ಕಾಲೋಚಿತ ರೋಗಗಳಿಂದ ರಕ್ಷಿಸುತ್ತದೆ.

ಹಾಗಲಕಾಯಿಯಲ್ಲಿ ಕಬ್ಬಿಣಾಂಶ, ಮೆಗ್ನೀಷಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಕೂಡ ಹೇರಳವಾಗಿದೆ. ಇದು ಸಾಂಕ್ರಾಮಿಕ ರೋಗಗಳಿಂದ ಮಾತ್ರವಲ್ಲದೆ ಅನೇಕ ರೀತಿಯ ಅಲರ್ಜಿಗಳಿಂದಲೂ ಮುಕ್ತಿಯನ್ನು ನೀಡುತ್ತದೆ. ನೀವು ಹಾಗಲಕಾಯಿ ರಸವನ್ನು ಸೇವಿಸಿದರೆ ಇನ್ನೂ ಸೂಕ್ತ.

ಹಾಗಲಕಾಯಿಯ ಪ್ರಯೋಜನಗಳು

1.ಹಾಗಲಕಾಯಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಾಮಬಾಣವಿದ್ದಂತೆ. ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಕಾಪಾಡುತ್ತದೆ. ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಅನಾವಶ್ಯಕ ಅಂಶಗಳು ದೇಹದಿಂದ ಹೊರಬರುತ್ತವೆ ಮತ್ತು ದೇಹವು ಸಂಪೂರ್ಣವಾಗಿ ನಿರ್ವಿಶೀಕರಣಗೊಳ್ಳುತ್ತದೆ. ಇದು ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಸಹ ಪೂರೈಸುತ್ತದೆ.

2. ಹೆಚ್ಚುತ್ತಿರುವ ದೇಹದ ಕೊಬ್ಬಿನಿಂದ ತೊಂದರೆಗೆ ಒಳಗಾಗುವವರಿಗೆ ಹಾಗಲಕಾಯಿ ಸೇವನೆ ಬೆಸ್ಟ್‌. ಇದು ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ. ಹೆಚ್ಚುತ್ತಿರುವ ಬೊಜ್ಜನ್ನು ಕಡಿಮೆ ಮಾಡುತ್ತದೆ. ಚಯಾಪಚಯ ದರವನ್ನು ಸುಧಾರಿಸುತ್ತದೆ ಮತ್ತು ಯಕೃತ್ತಿಗೆ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಬದಲಾಗುತ್ತಿರುವ ಋತುವಿನಲ್ಲಿ ನೀವು ಇದನ್ನು ಸೇವಿಸಿದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

3. ಚಳಿಗಾಲದಲ್ಲಿ ತ್ವಚೆಯ ಶುಷ್ಕತೆ ಹೆಚ್ಚುವುದು ಮತ್ತು ಇದರಿಂದ ಮುಖವು ನಿಸ್ತೇಜವಾಗಿ ಕಾಣುವುದು ಸಹಜ. ಚರ್ಮಕ್ಕೆ ಸಹ ಹಾನಿಯಾಗುವ ಅಪಾಯವೂ ಇದೆ. ಹಾಗಲಕಾಯಿಯಲ್ಲಿ ಚರ್ಮದ ವಯಸ್ಸಾಗುವುದನ್ನು ತಡೆಯುವ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಹಾಗಲಕಾಯಿ ಸೇವನೆಯಿಂದ ಮೊಡವೆಗಳು ಮತ್ತು ಸುಕ್ಕುಗಳು ನಿವಾರಣೆಯಾಗುತ್ತವೆ. ಹಾಗಾಗಿ ಚಳಿಗಾಲದಲ್ಲಿ ಹಾಗಲಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...