ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಕಾಯಿಲೆ ಬೀಳಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಂತರ ಇವುಗಳನ್ನು ಸೇವಿಸಿದರೆ ಆರೋಗ್ಯವಾಗಿರಬಹುದು.
ಚಳಿಗಾಲದಲ್ಲಿ ಖಾಲಿಹೊಟ್ಟೆಯಲ್ಲಿ ಪಪ್ಪಾಯವನ್ನು ತಿನ್ನಿ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ.
BIG NEWS: ರಾಜ್ಯದಲ್ಲಿಂದು 399 ಜನರಿಗೆ ಸೋಂಕು ದೃಢ, 6 ಮಂದಿ ಸಾವು; ಇಲ್ಲಿದೆ ವಿವರ
ಚಳಿಗಾಲದಲ್ಲಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ. ಇದರಲ್ಲಿ ವಿಟಮಿನ್ ಇ, ಪ್ರೋಟೀನ್, ಫೈಬರ್, ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಮೆದುಳನ್ನು ಆರೋಗ್ಯವಾಗಿಡುತ್ತದೆ. ಹಾಗೇ ಇದು ದೇಹವನ್ನು ಬೆಚ್ಚಗಿರಿಸುತ್ತದೆ.
ಚಳಿಗಾಲದಲ್ಲಿ ರಾತ್ರಿ ನೆನೆಸಿಟ್ಟ ವಾಲ್ ನಟ್ಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ರೋಗಗಳ ಅಪಾಯ ಕಡಿಮೆಯಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಡ್ರೈಫ್ರೂಟ್ಸ್ ಗಳನ್ನು ಸೇವಿಸಿ. ಇದು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ.