ಚಳಿಗಾಲ ಶುರುವಾಗಿದೆ. ಉಳಿದ ಋತುವಿಗಿಂತ ಈ ಋತುವಿನಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಕಾಂತಿ ಕಳೆದುಕೊಳ್ಳುವ ಕೈ- ಕಾಲುಗಳು ಬಿರುಕು ಬಿಡಲು ಶುರುವಾಗುತ್ತವೆ. ಕೈಗಳು ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಕಳೆದುಕೊಂಡು ಒರಟಾಗುತ್ತದೆ. ಚಳಿಗಾಲದಲ್ಲಿ ಕೈಗಳ ಆರೈಕೆ ಬಹಳ ಮುಖ್ಯ.
ಚಳಿಗಾಲದಲ್ಲಿ ರಾತ್ರಿ ಮಲಗುವ ಮೊದಲು ಕೈಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಮಲಗಿ. ಬೆಳಿಗ್ಗೆ ಕೈಗಳು ಮೃದುವಾಗಿ ಕೋಮಲವಾಗುತ್ತವೆ.
ಕೈಗೆ ಸಿಕ್ಕ ಸೋಪ್ ಬಳಸುವ ಅಭ್ಯಾಸ ಬಿಟ್ಟುಬಿಡಿ. ಆಲಿವ್ ಆಯಿಲ್ ಅಥವಾ ಟೀ ಟ್ರೀ ಆಯಿಲ್ ಇರುವ ಸೋಪನ್ನು ಮಾತ್ರ ಖರೀದಿ ಮಾಡಿ. ಅದೇ ಸೋಪನ್ನು ಚಳಿಗಾಲದಲ್ಲಿ ಬಳಸಿ.
ವಿನೆಗರ್ ನಿಂದ ಕೂಡ ನಿಮ್ಮ ಕೈ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಬೆಚ್ಚನೆ ನೀರಿಗೆ ವಿನೆಗರ್ ಬೆರೆಸಿ ಆ ನೀರಿನಲ್ಲಿ ನಿಮ್ಮ ಕೈಗಳನ್ನು ಬ್ರಷ್ ಸಹಾಯದಿಂದ ನಿಧಾನವಾಗಿ ಉಜ್ಜಿ.
ನೀರಿನಲ್ಲಿ ನಿಮ್ಮ ಸೌಂದರ್ಯದ ಗುಟ್ಟು ಅಡಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರು ಕುಡಿಯಲು ಮನಸ್ಸಾಗುವುದಿಲ್ಲ. ಹಾಗಂತ ನೀರು ಸೇವನೆ ಬಿಡಬಾರದು. ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿದಲ್ಲಿ ಕೈ ಕೋಮಲವಾಗುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ ಬದಲು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.
ಮನೆಯಿಂದ ಹೊರಗೆ ಹೋಗುವಾಗ ಗ್ಲೌಸ್ ಧರಿಸಿ. ನೆನಪಿಟ್ಟು ಸನ್ ಸ್ಕ್ರೀಮ್ ಹಚ್ಚಿ ಮನೆಯಿಂದ ಹೊರಗೆ ಹೋಗಿ. ಸ್ನಾನಕ್ಕೆ ತುಂಬಾ ಬಿಸಿ ನೀರು ಬೇಡ.