alex Certify ಚಲಿಸುತ್ತಿರುವ ರೈಲು ಏರಲು ಮುಂದಾದ ಮಹಿಳೆ, ಕ್ಷಣಮಾತ್ರದಲ್ಲಿ ನಡೀತು ಇಂಥ ಆಘಾತಕಾರಿ ಘಟನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿರುವ ರೈಲು ಏರಲು ಮುಂದಾದ ಮಹಿಳೆ, ಕ್ಷಣಮಾತ್ರದಲ್ಲಿ ನಡೀತು ಇಂಥ ಆಘಾತಕಾರಿ ಘಟನೆ….!

ಚಲಿಸ್ತಾ ಇರೋ ರೈಲು ಏರಲು ಪ್ರಯಾಣಿಕರು ಹುಚ್ಚು ಸಾಹಸ ಮಾಡಿ ಅಪಾಯಕ್ಕೆ ಸಿಕ್ಕಿಹಾಕಿಕೊಳ್ತಾನೇ ಇದ್ದಾರೆ. ಸೊಲ್ಲಾಪುರ ರೈಲು ನಿಲ್ದಾಣದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದೆ.

ಕೈಯ್ಯಲ್ಲಿ ಬ್ಯಾಗ್‌ ಹಿಡಿದ ಮಹಿಳೆಯೊಬ್ಬಳು ಚಲಿಸ್ತಾ ಇರುವ ರೈಲನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಆದ್ರೆ ನಿಯಂತ್ರಣ ಸಿಗದೇ ಕೆಳಕ್ಕೆ ಬಿದ್ದಿದ್ದಾಳೆ. ಸ್ವಲ್ಪ ಯಡವಟ್ಟಾಗಿದ್ದರೂ ಮಹಿಳೆ ಹಳಿಗಳ ಮಧ್ಯೆ ಬಿದ್ದು ಪ್ರಾಣ ಕಳೆದುಕೊಳ್ತಾ ಇದ್ಲು.

ರೈಲ್ವೆ ಭದ್ರತಾ ಸಿಬ್ಬಂದಿ ತಕ್ಷಣವೇ ಧಾವಿಸಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಹಳಿಗಳ ಮೇಲೆ ಬೀಳುತ್ತಿದ್ದ ಮಹಿಳೆಯನ್ನು ಎಳೆದು ಬದಿಗೆ ಸರಿಸಿದ್ದಾರೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಆಕೆ ಬಚಾವ್‌ ಆಗಿದ್ದಾಳೆ. ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಇದಕ್ಕೂ ಮುನ್ನ ಪ್ರಯಾಣಿಕರೊಬ್ಬರ ಬೈಕ್ ರೈಲಿಗೆ ಸಿಲುಕಿ ತುಂಡಾಗಿರುವ ವಿಡಿಯೋ ವೈರಲ್ ಆಗಿತ್ತು. ವ್ಯಕ್ತಿಯ ಬೈಕ್ ರೈಲ್ವೇ ಟ್ರ್ಯಾಕ್ ಕ್ರಾಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ರೈಲಿನಡಿ ಸಿಕ್ಕು ಅದು ಎರಡು ತುಂಡಾಗಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...