ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಬಿರುಕು ಬಿಡುತ್ತದೆ. ಹೆಚ್ಚಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಕಾಡುತ್ತದೆ. ಆಗ ನಾವು ಮೊಯಿಶ್ಚರೈಸರ್ ಕ್ರಿಂಗಳನ್ನು ಹಚ್ಚುತ್ತೇವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದಲೂ ನಾವು ಚರ್ಮದ ತೇವಾಂಶವನ್ನು ಲಾಕ್ ಮಾಡಬಹುದು. ಹಾಗಾದ್ರೆ ಆ ಆಹಾರಗಳು ಯಾವುದೆಂದು ತಿಳಿಯೋಣ.
ತೆಂಗಿನ ಕಾಯಿ: ತೆಂಗಿನಕಾಯಿ ಒಣ ಚರ್ಮದ ಸಮಸ್ಯೆಗೆ ಉತ್ತಮ ಮನೆಮದ್ದು. ಕೊಬ್ಬರಿಯನ್ನು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಿಮ್ಮ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
ಅವಕಾಡೊ : ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು, ಪ್ರೋಟಿನ್ ಗಳು ಮತ್ತು ಜೀವಸತ್ವಗಳು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ.
ಸಿಹಿ ಗೆಣಸು : ಇದರಲ್ಲಿ ವಿಟಮಿನ್ ಎ ಹೇರಳವಾಗಿದ್ದು, ಇದು ಚರ್ಮದ ತೇವಾಂಶವನ್ನು ಒಳಗಿನಿಂದ ಲಾಕ್ ಮಾಡಿ ಹೊಳೆಯುವಂತೆ ಮಾಡುತ್ತದೆ.
ಆಲಿವ್ ಆಯಿಲ್ : ಈ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ನಿಮ್ಮ ಚರ್ಮ ತೇವಾಂಶದಿಂದ ಕೂಡಿರುತ್ತದೆ.
ಕ್ಯಾರೆಟ್ : ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.