ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಂಡು ಗ್ರಾಹಕರು ದಂಗಾಗುತ್ತಿದ್ದಾರೆ. ಐತಿಹಾಸಿಕ ದಾಖಲೆ ಬರೆಯುವ ಮಟ್ಟಿಗೆ ತರಕಾರಿ ಬೆಲೆ ಏರಿಕೆ ಕಾಣುತ್ತಿದೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಇನ್ನೇನು ರೈತರು ಬೆಳೆದ ಬೆಳೆ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿಯೇ ವರುಣರಾಯ ತನ್ನ ಆಟ ಶುರು ಮಾಡಿದ. ಇದರಿಂದಾಗಿ ಬೆಳೆಗಳು ಮಣ್ಣಲ್ಲಿಯೇ ಮಣ್ಣಾಗುವಂತಾಯಿತು. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ಈ ಪರಿಸ್ಥಿತಿ ಇನ್ನೂ ಮೂರ್ನಾಲ್ಕು ತಿಂಗಳ ಕಾಲ ಹಾಗೆ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗ್ರಾಹಕರು ಪರಿತಪಿಸುವಂತಾಗಿದೆ.
ಇಲ್ಲಿವೆ 2021 ರಲ್ಲಿ ಇಂಟರ್ ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ ಭಾರತದ ಟಾಪ್ 10 ವಿಡಿಯೋ
ಹೊಸದಾಗಿ ರೈತರು ಬೆಳೆಯುವ ತರಕಾರಿ ಮಾರುಕಟ್ಟೆಗೆ ಬರುವವರೆಗೂ ಗ್ರಾಹಕರು ಇದೇ ದರದಲ್ಲಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಗೆಯ ತರಕಾರಿಗಳು ನೂರು ರೂಪಾಯಿಯ ಗಡಿ ದಾಟಿ ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ 50 ರೂ.ನಿಂದ 100ರೂ. ವರೆಗೆ ಮಾರಾಟವಾಗುತ್ತಿದೆ. ನುಗ್ಗೆಕಾಯಿ ಕೆಜಿಗೆ 200ರೂ. ನಿಂದ 350 ರೂ. ವರೆಗೆ ಮಾರಾಟವಾಗುತ್ತಿದೆ. ಬಹುತೇಕ ತರಕಾರಿಗಳು ಕೆಜಿಗೆ 50 ರೂ.ಯಿಂದ 100 ರೂ. ದರದಲ್ಲಿ ಮಾರಾಟವಾಗುತ್ತಿವೆ. ಸೊಪ್ಪಿನ ದರದಲ್ಲಿ ಕೂಡ ಏರಿಕೆಯಾಗಿದೆ.