1 .5 ಕಪ್ ಗೋಧಿಹಿಟ್ಟು, 1 ¼ ಕಪ್ ಹಾಲು, 1.5 ಟೀ ಸ್ಪೂನ್- ಲಿಂಬೆ ಹಣ್ಣಿನ ರಸ, ಶುಂಠಿ-ತುರಿದಿದ್ದು 1 ಟೀ ಸ್ಪೂನ್, ಬೆಲ್ಲ-1 ಕಪ್, ಬೇಕಿಂಗ್ ಸೋಡಾ-1/2 ಟೀ ಸ್ಪೂನ್, 1 ಟೀ ಸ್ಪೂನ್-ಬೇಕಿಂಗ್ ಪೌಡರ್, ಎಣ್ಣೆ-1/2 ಕಪ್.
ಮಾಡುವ ವಿಧಾನ:
ಮೊದಲಿಗೆ 1 ಕಪ್ ಹಾಲಿಗೆ ಲಿಂಬೆ ಹಣ್ಣಿನ ರಸ ಹಾಕಿ ಕದಡಿಸಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಒಂದು ಬೌಲ್ ಗೆ ಬೆಲ್ಲದ ಪುಡಿ ಹಾಕಿ ಅದಕ್ಕೆ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಲಿಂಬೆ ಹಣ್ಣಿನ ಮಿಶ್ರಣದ ಹಾಲನ್ನು ಬೆಲ್ಲದ ಮಿಶ್ರಣಕ್ಕೆ ಹಾಕಿ ಒಂದು ಸೌಟಿನ ಸಹಾಯದಿಂದ ಮಿಕ್ಸ್ ಮಾಡಿ.
ನಂತರ ಗೋಧಿಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿದು ಬೆಲ್ಲದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ತುರಿದ ಶುಂಠಿಯನ್ನು ಹಾಕಿ. ನಂತರ ಕಾಲು ಕಪ್ ಹಾಲು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದು ದೋಸೆ ಹಿಟ್ಟಿನ ಹದಕ್ಕೆ ಬರಲಿ. ಇದನ್ನು ಕೇಕ್ ಮೌಲ್ಡ್ ಗೆ ಹಾಕಿ ನಂತರ ಒಂದು ದಪ್ಪ ತಳದ ಪಾತ್ರೆ ಗ್ಯಾಸ್ ಮೇಲೆ ಇಟ್ಟು. ಅದರ ಮೇಲೆ ಈ ಕೇಕ್ ಮೌಲ್ಡ್ ಇಟ್ಟು 40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.