ಗೊರಕೆ ಇದು ಹೆಚ್ಚಿನವರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಹಾಗೇ ಇನ್ನೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಲವೊಂದು ಮನೆಮದ್ದಿನಿಂದ ಈ ಗೊರಕೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 1 ಟೀ ಸ್ಪೂನ್ ಅರಿಶಿನ, 1 ಟಿ ಸ್ಪೂನ್ ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ರಾತ್ರಿ ಊಟವೆಲ್ಲಾ ಆದ ಮೇಲೆ ಮಲಗುವ ಮೊದಲು ಕುಡಿಯಿರಿ. ಒಂದು ತಿಂಗಳು ಇದನ್ನು ಮಾಡುವುದರಿಂದ ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ.
ಇನ್ನು ಒಂದು ಗ್ಲಾಸ್ ಬಿಸಿ ಹಾಲಿಗೆ ಚಿಟಿಕೆ ಅರಿಶಿನ ಸೇರಿಸಿ ಮಲಗುವ ಮೊದಲು ಕುಡಿದರೆ ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ.
ಒಂದು ಗ್ಲಾಸ್ ಬಿಸಿ ನೀರಿಗೆ ಚೆನ್ನಾಗಿ ತೊಳೆದ 10 ಪುದೀನಾ ಎಲೆಗಳನ್ನು ಹಾಕಿ ನೀರು ಉಗುರು ಬೆಚ್ಚಗಾಗುವವರೆಗೆ ಕಾದು ಅದಕ್ಕೆ 1 ಟೀ ಸ್ಪೂನ್ ಜೇನುತುಪ್ಪ ಸೇರಿಸಿ ಕುಡಿಯಿರಿ.
ಇನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ಟೀ ಸ್ಪೂನ್ ನಷ್ಟು ಏಲಕ್ಕಿ ಪುಡಿ ಸೇರಿಸಿ ಕುಡಿದರೆ ಗೊರಕೆ ಸಮಸ್ಯೆ ನಿವಾರಣೆಯಾಗುತ್ತದೆ.