alex Certify ಗೆಳೆಯರೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಹೃತಿಕ್ ರೋಶನ್ ಮತ್ತು ಸೂಸೈನ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯರೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಹೃತಿಕ್ ರೋಶನ್ ಮತ್ತು ಸೂಸೈನ್ ಖಾನ್

Hrithik Roshan, Sussanne Khan step out for lunch with Sonali Bendre and friends | Bollywood - Hindustan Timesಹೃತಿಕ್ ರೋಶನ್ ಬಾಲಿವುಡ್​​ನ ಜಗತ್ತಿನ ಸೂಪರ್ ಸ್ಟಾರ್. ಅನೇಕ ಹಿಟ್ ಸಿನೆಮಾಗಳನ್ನ ಕೊಟ್ಟ ಹೃತಿಕ್ ರೋಶನ್ ತಮ್ಮ ಸಿನೆಮಾದ ಹೊರತುಪಡಿಸಿ ತಮ್ಮ ಖಾಸಗಿ ಜೀವನ ಶೈಲಿಯಿಂದಲೂ ಸುದ್ದಿಯಲ್ಲಿದ್ದವರು. ಸೂಸೈನ್ ಖಾನ್ ಅವರಿಗೆ ವಿಚ್ಛೇದನ ಕೊಟ್ಟು ಅನೇಕ ವರ್ಷಗಳಾದರೂ, ಮಾಜಿ ಪತಿ – ಪತ್ನಿ ಅನ್ನುವುದನ್ನ ಮರೆತು, ಇಂದಿಗೂ ಇವರಿಬ್ಬರೂ ಉತ್ತಮ ಗೆಳೆಯರಂತೆ ಇದ್ದಾರೆ.

ಇತ್ತೀಚೆಗೆ ಇದೇ ಹೃತಿಕ್-ಸೂಸೈನ್ ಜೋಡಿ ಸೋನಾಲಿ ಬೇಂದ್ರೆ, ಗೋಲ್ಡಿ ಬಹಲ್, ಗಾಯತ್ರಿ ಜೋಶಿ ಮತ್ತು ವಿಕಾಸ್ ಓಬೇರಾಯ್ ಗೆಳೆಯರ ಗುಂಪಿನೊಂದಿಗೆ ಕಾಣಿಸಿಕೊಂಡಿದೆ.

ಎಂದಿನಂತೆ ಕಪ್ಪು ಬಣ್ಣದ ಟಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್, ಹಾಗೂ ಕಪ್ಪುಕನ್ನಡಕದಲ್ಲಿನಲ್ಲಿ ಹೃತಿಕ್ ಮಿಂಚುತ್ತಿದ್ದರೆ, ಸೂಸೈನ್ ಕಪ್ಪು ಬಣ್ಣದ ಟಾಪ್ ಹಾಗೂ ಬ್ಲ್ಯೂ ಜೀನ್ಸ್​​ನಲ್ಲಿ ಮಿಂಚುತ್ತಿದ್ದರು. ಇನ್ನು ನಟಿ ಸೋನಾಲಿ ಬೇಂದ್ರೆ ಬಿಳಿ ಬಣ್ಣದ ಟಾಪ್ ಹಾಗೂ ಗಿಳಿ ಹಸಿರು ಬಣ್ಣದ ಪ್ಯಾಂಟ್ ಹಾಕಿಕೊಂಡು ಮಿಂಚುತ್ತಿದ್ದರು. ಹೊಟೇಲ್ ಒಂದರಲ್ಲಿ ಊಟಕ್ಕೆ ಹೋಗಿದ್ದ ಈ ಗೆಳೆಯರ ಗುಂಪಿನಲ್ಲಿ ತಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗಿದ್ದರು.

ಹೊಟೇಲ್​​ನಲ್ಲಿ ಊಟ ಮುಗಿಸಿದ ನಂತರ ಅಲ್ಲೇ ಇದ್ದ ಫೋಟೋಗ್ರಾಫರ್​ಗಳಿಗೆ ಈ ಗೆಳೆಯರು ಗುಂಪಿನಲ್ಲಿ ಪೋಸ್ ಕೊಟ್ಟಿದ್ದು ಎಲ್ಲರ ಗಮನ ಸೆಳೆದಿತ್ತು.

ಸೂಸೈನ್ ಪ್ರಸ್ತುತ ಅಸ್ರ್ಲಾನ್ ಗೋನಿಯೊಂದಿಗೆ ಡೇಟ್ ಮಾಡ್ತಿದ್ದಾರೆ. ನಟ ಹೃತಿಕ್ ಸಬಾ ಆಜಾದ್ ಜೊತೆಯಲ್ಲಿದ್ದಾರೆ. 2014ರಲ್ಲಿ ವಿಚ್ಚೇದನ ಪಡೆದರೂ ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತೆ. ಅದೇ ರೀತಿ ಈಗಲೂ ಮತ್ತೆ ಕಾಣಿಸಿಕೊಂಡಿದ್ದಾರೆ. ಹಾಗಂತ ಈ ಜೋಡಿ ಈಗ ಮತ್ತೆ ಒಂದಾಗುತ್ತಿದ್ದಾರೆ ಅಂತ ಅರ್ಥ ಅಲ್ಲ. ಮಕ್ಕಳಿಗಾಗಿ ಇವರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು ಅಂತ ಹೇಳಲಾಗುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...