ಮಾಸ್ಕೋ : ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಯುವ ಪೀಳಿಗೆ ಹಾಳಾಗುತ್ತಿದ್ದು, ಕೆಲವು ಅಂಶಗಳನ್ನು ಪ್ರಸಾರ ಮಾಡಬಾರದು ಎಂಬ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಹಲವಾರು ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಆದರೆ, ಇದಕ್ಕೆ ಸಾಮಾಜಿಕ ಜಾಲತಾಣಗಳು ಸರಿಯಾಗಿ ಸ್ಪಂದಿಸದೆ ದಂಡಕ್ಕೆ ಗುರಿಯಾದ ಸಂಗತಿ ನಡೆದಿದೆ.
ನಿಷೇಧಿತ ಮಾಹಿತಿಯನ್ನು ತೆಗೆದು ಹಾಕಲು ಗೂಗಲ್ ಹಾಗೂ ಫೇಸ್ ಬುಕ್ ಮೂಲ ಹೆಸರಿನ ಮೆಟಾಗೆ ಮಾಸ್ಕೋ ನ್ಯಾಯಾಲಯ ಭಾರೀ ದಂಡ ವಿಧಿಸಿದೆ. ನಿಷೇಧಿತ ಅಂಶಗಳನ್ನು ತೆಗೆದು ಹಾಕಬೇಕೆಂದು ಹಲವು ಬಾರಿ ಸೂಚನೆ ನೀಡಿದರೂ ಕೇಳದ ಮೆಟಾಗೆ 175 ಕೋಟಿ ರೂಪಾಯಿ ಹಾಗೂ ಗೂಗಲ್ ಗೆ 750 ಕೋಟಿ ರೂಪಾಯಿ ದಂಡ ವಿಧಿಸಿ ಮಾಸ್ಕೋದ ಟ್ಯಾಗನ್ಸ್ಕಿ ಕೋರ್ಟ್ ಆದೇಶ ನೀಡಿದೆ.
investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್
ಗೂಗಲ್ ಹಾಗೂ ಫೇಸ್ ಬುಕ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ಮಾದಕ ದ್ರವ್ಯಗಳ ಕುರಿತು ಸೇರಿದಂತೆ ಕೆಲವು ಅಂಶಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದ್ದರೂ ತೆಗೆಯದ ಕಾರಣ ಭಾರೀ ದಂಡ ವಿಧಿಸಲಾಗಿದೆ.
ಇನ್ನಿತರ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿಗೆ ಈ ದಂಡದ ಮೂಲಕ ಸಂದೇಶ ಸಾರಿದಂತಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಕಿನ್ ಸ್ಟೈನ್ ಹೇಳಿದ್ದಾರೆ.