ಗೂಗಲ್ ಒಂದು ಜನಪ್ರಿಯ ಸರ್ಚ್ ಇಂಜಿನ್ ಆಗಿದೆ. ಬಹುತೇಕ ಎಲ್ಲಾ ಇಂಟರ್ನೆಟ್ ಬಳಕೆದಾರರು ಗೂಗಲ್ನ್ನು ಬಳಕೆ ಮಾಡುತ್ತಾರೆ. ಯಾವುದೇ ವಿಚಾರವನ್ನು ತಿಳಿದುಕೊಳ್ಳಬೇಕು ಅಂದರೆ ಜನರು ಗೂಗಲ್ ಮಾಡಿ ನೋಡುತ್ತಾರೆ.
ಗೂಗಲ್ ಕೂಡ ಜನರ ಪ್ರಶ್ನೆಗಳಿಗೆ ಕೆಲವೇ ಸೆಕೆಂಡ್ಗಳಲ್ಲಿ ಉತ್ತರ ನೀಡುತ್ತದೆ. ಆದರೆ ಈ ಗೂಗಲ್ನಲ್ಲಿ ನೀವು ಯಾವುದೇ ವಿಚಾರಗಳನ್ನು ಹುಡುಕುವ ಮುನ್ನ ಎಚ್ಚರವಾಗಿ ಇರಬೇಕು. ಏಕೆಂದರೆ ಕೆಲವು ವಿಚಾರಗಳು ನಿಮ್ಮನ್ನು ಜೈಲಿಗೆ ತಳ್ಳುವ ಸಾಧ್ಯತೆ ಕೂಡ ಇದೆ.
ಹಾಗಾದರೆ ಯಾವೆಲ್ಲ ವಿಚಾರಗಳನ್ನು ನೀವು ಗೂಗಲ್ನಲ್ಲಿ ಸರ್ಚ್ ಮಾಡಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ:
ಚಲನಚಿತ್ರ ಪೈರಸಿ:
ಬಿಡುಗಡೆಗೂ ಮುನ್ನ ಪೈರಸಿ ಕಾಟಕ್ಕೆ ಒಳಗಾಗುವ ಸಿನಿಮಾಗಳು ಅಪರಾಧದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಪೈರೇಟೆಡ್ ಸಿನಿಮಾಗಳನ್ನು ಡೌನ್ಲೋಡ್ ಮಾಡಿ ವೀಕ್ಷಿಸುವುದೂ ಸಹ ಅಪರಾಧ ಎಂದು ಪರಿಗಣಿಸಲಾಗಿದೆ.
ಈ ಕಾನೂನನ್ನು ಉಲ್ಲಂಘನೆ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಅಥವಾ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಕೆಯಾಗಲಿದೆ.
ಬಾಂಬ್ ತಯಾರಿಸುವುದು ಹೇಗೆ..?
ತಮಾಷೆಗೆಂದು ನೀವು ಗೂಗಲ್ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ಸರ್ಚ್ ಮಾಡಿದರೂ ಸಹ ನಿಮಗೆ ಜೈಲೂಟ ಫಿಕ್ಸ್ ಆಗಬಹುದು.
ಈ ವಿಚಾರಗಳನ್ನು ಸೈಬರ್ ಸೆಲ್ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ನೀವು ಈ ರೀತಿಯಾಗಿ ಗೂಗಲ್ ಸರ್ಚ್ ಮಾಡಿದಲ್ಲಿ ತಕ್ಷಣವೇ ನಿಮ್ಮ ವಿವರಗಳನ್ನು ಭದ್ರತಾ ಏಜೆನ್ಸಿಗೆ ರವಾನೆ ಮಾಡಲಾಗುತ್ತದೆ.
ಗರ್ಭಪಾತ ಮಾಡುವುದು ಹೇಗೆ..?
ಹೌದು..! ಗರ್ಭಪಾತ ಮಾಡುವ ಮಾರ್ಗವನ್ನು ಹುಡುಕಲು ನೀವು ಗೂಗಲ್ ಮೊರೆ ಹೋಗಿದ್ದರೆ ಖಂಡಿತವಾಗಿಯೂ ತೊಂದರೆಗೆ ಸಿಲುಕಲಿದ್ದೀರಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರನ್ನು ಸಂಪರ್ಕಿಸದೇ ಗರ್ಭಪಾತ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ.